ETV Bharat / state

ಅಂಜನಾದ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿಪಡಿಸುವ ಕೆಲಸ ನಡೆದಿದೆ: ಡಿಸಿ ವಿಕಾಸ ಕಿಶೋರ್​ ಸುರಳ್ಕರ್ - ಅಂಜನಾದ್ರಿ ಅಭಿವೃದ್ದಿಪಡಿಸುವ ಕುರಿತು ಡಿಸಿ ವಿಕಾಸ ಕಿಶೋರ್​ ಪ್ರತಿಕ್ರಿಯೆ

ಹನುಮಂತನ ಜನ್ಮಸ್ಥಳದ ಬಗ್ಗೆ ಆಂಧ್ರದ ಟಿಟಿಡಿ ವಾದದ ಕುರಿತು ನಾನು ಏನೂ ಹೇಳುವುದಿಲ್ಲ. ಇದು ಪೌರಾಣಿಕ ಹಿನ್ನಲೆ ಇರುವುದರಿಂದ ನಾವು ಹೇಳುವುದು ಸಮಂಜಸವಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್​ ಸುರಳ್ಕರ್ ಹೇಳಿದ್ದಾರೆ.

dc-vikas-kishor-suralkar
ಡಿಸಿ ವಿಕಾಸ ಕಿಶೋರ್​ ಸುರಳ್ಕರ್
author img

By

Published : Feb 14, 2022, 8:17 PM IST

ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಪರ್ವತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುವುದಾಗಿ ಸಿಎಂ ಹೇಳಿದ್ದು, ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್​​​ ಸುರಳ್ಕರ್ ಹೇಳಿದ್ದಾರೆ.

ಡಿಸಿ ವಿಕಾಸ ಕಿಶೋರ್​ ಸುರಳ್ಕರ್ ಮಾತನಾಡಿದರು

ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಹನುಮಂತನ ಜನ್ಮ ಸ್ಥಳದ ಬಗ್ಗೆ ಆಂಧ್ರದ ಟಿಟಿಡಿ ವಾದದ ಕುರಿತು ನಾನು ಏನೂ ಹೇಳುವುದಿಲ್ಲ. ಇದು ಪೌರಾಣಿಕ ಹಿನ್ನೆಲೆ ಇರುವುದರಿಂದ ನಾವು ಹೇಳುವುದು ಸಮಂಜಸವಲ್ಲ ಎಂದರು.

ಅಂಜನಾದ್ರಿ ಪರ್ವತವು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಈ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಕಷ್ಟು ನಿಯಮ ಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಬದಲಾವಣೆ ಮಾಡಬೇಕಿದ್ದು, ಈ ಕೆಲಸ ನಡೆದಿದೆ. ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಬಗ್ಗೆಯೂ ಇಂದು ಚರ್ಚೆ ನಡೆದಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ‌ಮಾರ್ಗಸೂಚಿ ನಡುವೆಯೇ ಕೆಲಸ ನಡೆದಿದೆ ಎಂದು ಹೇಳಿದರು.

ಓದಿ: ಮಧ್ಯರಾತ್ರಿ ಹೋಟೆಲ್​​​​ಗೆ ನುಗ್ಗಿ ಎರಡೂವರೆ ನಿಮಿಷದಲ್ಲಿ 70 ಸಾವಿರ ಕದ್ದ ಖದೀಮರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.