ಕೊಪ್ಪಳ: ಜಿಲ್ಲಾಡಳಿತ ಭವನಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದುಕೊಂಡ ಪ್ರಮಾಣ ಪತ್ರ ತೋರಿಸಬೇಕು ಹಾಗೂ ಮಾಸ್ಕ್ ಹಾಕಿಕೊಂಡು ಬರಬೇಕು ಎಂಬ ಜಿಲ್ಲಾಧಿಕಾರಿಗಳ ಆದೇಶ ಮೊದಲ ದಿನವೇ ಉಲ್ಲಂಘನೆ ಆಗಿದೆ.
ಇಂದು ಜಿಲ್ಲಾಡಳಿತ ಭವನದಲ್ಲಿ ಶಿಕ್ಷಕರ ದಿನಾಚರಣೆ, ಮಾತೃವಂದನಾ ಹಾಗೂ ಪೋಷಣಾ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ಜರುಗಿತು. ಸಚಿವ ಹಾಲಪ್ಪ ಆಚಾರ್ ಚಾಲನೆ ನೀಡಿದ್ರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಇಂದು ಸಾವಿರಾರು ಜನರು ಬಂದು ಹೋಗಿದ್ದಾರೆ. ಆದರೆ ನಿಯಮ ಪಾಲನೆ ಮಾತ್ರ ಪಾಲನೆಯಾಗಲಿಲ್ಲ.
ಜಿಲ್ಲಾಡಳಿತ ಭವನದಲ್ಲಿ ಲಸಿಕೆ ಹಾಕಿಸಿಕೊಂಡವರ ಬಗ್ಗೆ ಪರಿಶೀಲನೆ ನಡೆಸಲಿಲ್ಲ. ಬಹುತೇಕರು ಮಾಸ್ಕ್ ಹಾಕಿಕೊಂಡಿರಲಿಲ್ಲ ಹಾಗೂ ಭೌತಿಕ ಅಂತರವಿರಲಿಲ್ಲ. ಈ ಮೂಲಕ ಜಿಲ್ಲಾಧಿಕಾರಿಗಳು ನಿನ್ನೆ ಹೊರಡಿಸಿದ್ದ ಆದೇಶಕ್ಕೆ ಯಾರೂ ಕ್ಯಾರೆ ಎನ್ನಲಿಲ್ಲ. ಆದರೆ ಈ ಆದೇಶ ನಾಳೆಯಿಂದ ಜಾರಿಯಾಗುತ್ತದೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಕ್ಕಳಿಲ್ಲದ ನೋವು ಮರೆಸಿದ ಶ್ವಾನಪ್ರೀತಿ : ನಿತ್ಯವೂ ಬೀದಿನಾಯಿಗಳಿಗೆ ಬಾಡೂಟ ಹಾಕುವ ಅಪರೂಪದ ದಂಪತಿ