ಕೊಪ್ಪಳ: ಇಲ್ಲಿನ ಭಾಗ್ಯನಗರ ಕ್ರಾಸ್ನ ರಸ್ತೆಯಲ್ಲಿರುವ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ರಸ್ತೆ ಕುಷ್ಟಗಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಆರಂಭದಲ್ಲಿರುವ ಈ ಸೇತುವೆಗೆ ಹಾಕಲಾಗಿದ್ದ ಸಿಮೆಂಟ್ ಕಿತ್ತು ಹೋಗಿದ್ದು, ದೊಡ್ಡ ಪ್ರಮಾಣದ ಗುಂಡಿ ಬಿದ್ದಿದೆ. ಯಾವಾಗ ಕುಸಿಯುತ್ತದೆಯೋ ಗೊತ್ತಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.
ಸವಾರರು ಮೈಮರೆತು ಚಾಲನೆ ಮಾಡಿಕೊಂಡು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಕುಷ್ಟಗಿ ಕಡೆಗೆ ವಾಹನ ತಿರುವು ಪಡೆಯುವಾಗ ಸೇತುವೆ ಎದುರಾಗುತ್ತದೆ. ಹೀಗಾಗಿ, ಈ ಸೇತುವೆ ದುರಸ್ತಿ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳುತ್ತಿದ್ದಾರೆ.