ETV Bharat / state

ದುರ್ಗಾಬೆಟ್ಟದಲ್ಲಿ ಚಿರತೆ ದಾಳಿಗೆ ಆಕಳು ಬಲಿ: ಆತಂಕದಲ್ಲಿ ಆನೆಗೊಂದಿ ಜನತೆ - leopard attack on cow

ಕಳೆದ ಕೆಲ ದಿನಗಳ ಹಿಂದೆ ಆನೆಗೊಂದಿ ಸಮೀಪದ ದುರ್ಗಾಬೆಟ್ಟದಲ್ಲಿ ಚಿರತೆ ದಾಳಿಗೆ ಪೂಜಾರಿ ಬಲಿಯಾಗಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಹಸುವೊಂದನ್ನು ಚಿರತೆ ಕೊಂದಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

cow died due to leopard attack
ದುರ್ಗಾಬೆಟ್ಟದಲ್ಲಿ ಮುಂದುವರೆದ ಚಿರತೆ ದಾಳಿಗೆ ಆಕಳು ಬಲಿ; ಆತಂಕದಲ್ಲಿ ಆನೆಗೊಂದಿ ಜನತೆ
author img

By

Published : Nov 17, 2020, 6:57 AM IST

ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ದುರ್ಗಾಬೆಟ್ಟದಲ್ಲಿ ಚಿರತೆ ಹಾವಳಿ ಮುಂದುವರೆದಿದೆ. ಇದೀಗ ಹಸುವನ್ನು ಚಿರತೆ ಕೊಂದಾಕಿರುವುದು ಜನರ ನಿದ್ದೆಗೆಡಿಸಿದೆ.

ಚಿರತೆ ದಾಳಿಗೆ ಆಕಳು ಬಲಿ

ಚಿರತೆ ದಾಳಿಯಿಂದ ಬಿಡಿಸಿಕೊಳ್ಳಲು ಹೋರಾಟ ನಡೆಸಿದ ಆಕಳು ತೀವ್ರ ಗಾಯಗೊಂಡು ಸಾವನ್ನಪ್ಪಿದೆ. ಘಟನೆಯಿಂದಾಗಿ ದೇವಸ್ಥಾನದ ಸಿಬ್ಬಂದಿ ಹಾಗೂ ಸುತ್ತಲಿನ ಜನ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಜನವಸತಿ ಪ್ರದೇಶದಲ್ಲಿ ನಿರಂತರವಾಗಿ ಕಂಡು ಬರುತ್ತಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ, ಕಳೆದ ಮೂರು ವಾರದಿಂದ ಶತಪ್ರಯತ್ನ ಮಾಡುತ್ತಿದ್ದರೂ ಕೂಡ ಯಾವುದೇ ಫಲ ಸಿಕ್ಕಿಲ್ಲ.

ಅಡುಗೆ ಭಟ್ಟನ ಹೊತ್ತೊಯ್ದು ತಿಂದಾಕಿದ ಚಿರತೆ: ಬೆಚ್ಚಿಬಿದ್ದ ಆನೆಗೊಂದಿ ಜನತೆ!

ದುರ್ಗಾ ದೇವಸ್ಥಾನಕ್ಕೆ ಸೇರಿದ ಸುಮಾರು 500ಕ್ಕೂ ಹೆಚ್ಚು ಹಸುಗಳಿವೆ. ಸೋಮವಾರ ಮೇಯಲು ಬಿಟ್ಟ ಸಂದರ್ಭ ಚಿರತೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.