ಕೊಪ್ಪಳ : ಜನವರಿ 19ರಂದು ನಡೆಯಬೇಕಿರುವ ಪ್ರಸಿದ್ಧ ಗವಿಮಠ ಜಾತ್ರೆ ಕುರಿತಂತೆ ಈಗಾಗಲೇ ಚರ್ಚಿಸಲಾಗಿದೆ. ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಜಿಲ್ಲೆಯಲ್ಲಿ ಅದ್ಧೂರಿ ಜಾತ್ರೆಗಳಿಗೆ ಅವಕಾಶವಿಲ್ಲ. ಯಾರೇ ಆಗಲಿ ಸರ್ಕಾರದ ಗೈಡಲೈನ್ಸ್ ಅನ್ನು ಪಾಲಿಸಬೇಕು. ಗವಿಮಠದ ಜಾತ್ರೆ ಬಗ್ಗೆ ಈಗಾಗಲೇ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಸರ್ಕಾರದ ನಿಯಮಗಳ ಪ್ರಕಾರ ಏನು ಮಾಡಲು ಸಾಧ್ಯತೆ ಇದೆಯೋ ಅದರ ಪ್ರಕಾರ ಜಾತ್ರೆ ನಡೆಯಲಿದೆ. ಈಗಾಗಲೇ ಸ್ವಾಮೀಜಿಗಳು ನಾವು ಸರ್ಕಾರದ ಆದೇಶ ಪಾಲನೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಕೋವಿಡ್ ಭೀತಿ : ಭಕ್ತರಿಗಿಲ್ಲ ಮಾದಪ್ಪನ ದರ್ಶನ, ಬಿಳಿಗಿರಿ ರಂಗನ ಜಾತ್ರೆಗೂ ಬ್ರೇಕ್
ಹಾಗಾಗಿ, ಯಾರೂ ಕೂಡ ನಿಯಮ ಮೀರುವಂತಿಲ್ಲ. ಜನರಲ್ಲಿ ಯಾವುದೇ ಗೊಂದಲ ಬೇಡ. ಸರ್ಕಾರದ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.