ETV Bharat / state

ಕೊಪ್ಪಳದಲ್ಲಿ ಪಂಚಾಯಿತಿ ಚುನಾವಣೆ ಗೆದ್ದು ಬೀಗಿದ ದಂಪತಿ - ಕೊಪ್ಪಳ ಸುದ್ದಿ

ಸೋಮಶೇಖರಯ್ಯ ಇನಾಮದಾರ್ ಹಾಗೂ ಅವರ ಪತ್ನಿ ದೀಪಾ ಇನಾಮದಾರ್ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಇಬ್ಬರೂ ಜಯ ಗಳಿಸಿದ್ದಾರೆ. 2 ಬಾರಿ ಸೋತು ಮೂರನೇ ಬಾರಿ ಸ್ಪರ್ಧಿಸಿದ್ದ ಪತಿ ಹಾಗೂ ಮೊದಲ ಬಾರಿ ಚುನಾವಣೆಗೆ ಇಳಿದಿದ್ದ ಪತ್ನಿ ವಿಜಯಿಗಳಾಗಿದ್ದಾರೆ.

Couples win Gram panchayat election in Koppal
ಕೊಪ್ಪಳದಲ್ಲಿ ಪಂಚಾಯಿತಿ ಚುನಾವಣೆ ಗೆದ್ದು ಬೀಗಿದ ದಂಪತಿ
author img

By

Published : Dec 30, 2020, 7:54 PM IST

ಕೊಪ್ಪಳ: ಪತಿ-ಪತ್ನಿ ಇಬ್ಬರೂ ಜಯ ಗಳಿಸುವ ಮೂಲಕ ಗ್ರಾಮ ಪಂಚಾಯತ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮ ಪಂಚಾಯತ್​ಗೆ ಪತಿ ಹಾಗೂ ಪತ್ನಿ ಇಬ್ಬರೂ ಚುನಾಯಿತರಾಗುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ‌.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದಂಪತಿಗೆ ಗೆಲುವು

ಸೋಮಶೇಖರಯ್ಯ ಇನಾಮದಾರ್ ಹಾಗೂ ಅವರ ಪತ್ನಿ ದೀಪಾ ಇನಾಮದಾರ್ ಅವರೇ ಈ ಅದೃಷ್ಟಶಾಲಿ ದಂಪತಿ. ಗ್ರಾಮದ ಒಂದನೇ ವಾರ್ಡಿನಿಂದ ಸ್ಪರ್ಧಿಸಿದ್ದ ಸೋಮಶೇಖರಯ್ಯ ಇನಾಮದಾರ ಹಾಗೂ 3ನೇ ವಾರ್ಡಿನಿಂದ ಅವರ ಪತ್ನಿ ದೀಪಾ ಇನಾಮದಾರ್ ಸ್ಪರ್ಧಿಸಿ ಗೆದ್ದಿದ್ದಾರೆ. ಕಳೆದ ಎರಡು ಬಾರಿ ಸೋಮಶೇಖರಯ್ಯ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.

ಈಗ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದು ವಿಜಯಿಯಾಗಿದ್ದಾರೆ‌. ಇದರ ಜೊತೆಗೆ ಇದೇ‌ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಅವರ ಪತ್ನಿಯೂ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಗ್ರಾ.ಪಂಚಾಯತ್​ ಮಾಜಿ ಅಧ್ಯಕ್ಷರಿಗೆ ಸೋಲುಣಿಸಿದ ಗಿರಿಜನ‌ ಅಭ್ಯರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.