ETV Bharat / state

ರಾಯಚೂರು ಮೂಲದ ವಿದ್ಯಾರ್ಥಿನಿಗೆ ಸೋಂಕು ದೃಢ: ಆತಂಕದಲ್ಲಿ ಕಾರಟಗಿ ಎಸ್​​ಎಸ್​ಎಲ್​ಸಿ ವಿದ್ಯಾರ್ಥಿಗಳು!

ಸಿಂಧನೂರು ಮೂಲದ ವಿದ್ಯಾರ್ಥಿನಿ ತನ್ನ ಚಿಕ್ಕಮ್ಮನ ಮನೆಯಿಂದ ಕಾರಟಗಿಯಲ್ಲಿನ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಬಂದಿದ್ದಳು. ಈಗಾಗಲೇ‌ ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಇಂದು ಸಹ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

corona-positive
ಆತಂಕದಲ್ಲಿ ಕಾರಟಗಿರಿ ಎಸ್​​ಎಸ್​ಎಲ್​ಸಿ ವಿದ್ಯಾರ್ಥಿಗಳು
author img

By

Published : Jul 1, 2020, 7:32 PM IST

ಕೊಪ್ಪಳ: ರಾಯಚೂರು ಮೂಲದ ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿನಿಗೆ ಕೊರೊನಾ‌ ದೃಢಪಟ್ಟಿದ್ದು, ಕೊಪ್ಪಳದ ಕಾರಟಗಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಭೀತಿ ಶುರುವಾಗಿದೆ‌.

ಸಿಂಧನೂರು ಮೂಲದ ವಿದ್ಯಾರ್ಥಿನಿ ತನ್ನ ಚಿಕ್ಕಮ್ಮನ ಮನೆಯಿಂದ ಕಾರಟಗಿಯಲ್ಲಿನ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಬಂದಿದ್ದಳು. ಈಗಾಗಲೇ‌ ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಇಂದು ಸಹ ಪರೀಕ್ಷೆ ಬರೆಯಲು ಕೇಂದ್ರಕ್ಕೆ ಬಂದಿದ್ದಳು.

ವಿದ್ಯಾರ್ಥಿನಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದ ನಂತರ ಆಕೆಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಆ ವಿದ್ಯಾರ್ಥಿನಿಯನ್ನು ರಾಯಚೂರು ಜಿಲ್ಲಾಡಳಿತ ಆ್ಯಂಬುಲೆನ್ಸ್‌ ಮೂಲಕ ಚಿಕಿತ್ಸೆಗೆ ಕರೆದೊಯ್ದಿದೆ. ಇದರಿಂದಾಗಿ ಸೋಂಕಿತ ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿಯಲ್ಲಿದ್ದ ಉಳಿದ 17 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗೆ ಈಗ ಕೊರೊನಾ ಆತಂಕ ಹೆಚ್ಚಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.