ಗಂಗಾವತಿ: ಪಾಲಕರೊಂದಿಗೆ ಮಹಾರಾಷ್ಟ್ರದಿಂದ ಪಟ್ಟಣದ ಕಿಲ್ಲಾ ಏರಿಯಾಗೆ ಬಂದಿದ್ದ ಮೂರು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಜೂನ್ 10 ರಂದು ನಗರಕ್ಕೆ ಆಗಮಿಸಿದ್ದ ಮಗು ಹಾಗೂ ಪೋಷಕರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ವಾರಂಟೈನ್ ಮಾಡಿ, ಸ್ಯಾಂಪಲ್ಸ್ ಪರೀಕ್ಷೆಗೆ ರವಾನಿಸಿದ್ದರು. ವರದಿಯಲ್ಲಿ ಮಗುವಿಗೆ ಸೋಂಕು ದೃಢಪಟ್ಟಿದೆ.
ಸದ್ಯ ಮಗುವನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ದೃಢಪಟ್ಟ ಬಳಿಕ ಕಿಲ್ಲಾ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.