ETV Bharat / state

ಕೊಪ್ಪಳದಲ್ಲಿ 521 ಸೋಂಕಿತರು ಪತ್ತೆ, 8 ಮಂದಿ ಸಾವು - ಕೊಪ್ಪಳ ಕೊರೊನಾ ಕೇಸ್

ಕೊಪ್ಪಳ ಜಿಲ್ಲೆಯಲ್ಲಿ ಗುರುವಾರ ಪತ್ತೆಯಾದ ಕೋವಿಡ್‌ ಪ್ರಕರಣಗಳ ಮಾಹಿತಿ ಇಲ್ಲಿದೆ...

koppal
ಕೊಪ್ಪಳದಲ್ಲಿ 521 ಸೋಂಕಿತರು ಪತ್ತೆ, 8 ಮಂದಿ ಸಾವು
author img

By

Published : May 21, 2021, 7:29 AM IST

ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ 521 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 8 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ 220, ಗಂಗಾವತಿ 187, ಕುಷ್ಟಗಿ 50 ಹಾಗು ಯಲಬುರ್ಗಾ ತಾಲೂಕಿನ 64 ಪ್ರಕರಣ ಸೇರಿ 521 ಕೋವಿಡ್​ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 27,394 ಸೋಂಕು ಪ್ರಕರಣಗಳು ದೃಢಪಟ್ಟಿವೆ. ನಿನ್ನೆ 8 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 453 ಮಂದಿ ಮಾರಕ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ನಿನ್ನೆ ಕೊರೊನಾದಿಂದ 306 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 22,101 ಜನರು ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 4,840 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 3,841 ಸೋಂಕಿತರು ಹೋಂ ಐಸೋಲೇಷನಲ್ಲಿ ಹಾಗು 999 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ: ಪಶು ವೈದ್ಯರು, ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.