ETV Bharat / state

ಒಂದೇ ಗ್ರಾಮದ 70ಕ್ಕೂ ಹೆಚ್ಚು ಜನರಿಗೆ ಕೊರೊನಾ, ನಿಷೇಧಾಜ್ಞೆ ಜಾರಿ - Corona positive case update

ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಒಂದು ವಾರ್ಡ್​ನಲ್ಲಿ ಕೊರೊನಾ ಸೋಂಕು‌ ಹರಡಿದ್ದು, 70 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

Corfew
Corfew
author img

By

Published : May 1, 2021, 3:36 PM IST

Updated : May 1, 2021, 7:13 PM IST

ಕೊಪ್ಪಳ: ಒಂದೇ ಗ್ರಾಮದಲ್ಲಿ 70ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಗ್ರಾಮದಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಒಂದು ವಾರ್ಡ್​ನಲ್ಲಿ ಕೊರೊನಾ ಸೋಂಕು‌ ಹರಡಿದ್ದು, 70 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಗ್ರಾಮದ ಆ ವಾರ್ಡನ್ನು ಸೀಲ್ ಡೌನ್ ಮಾಡಲಾಗಿದೆ.

ಬಿನ್ನಾಳ ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮದಲ್ಲಿ ಸುಮಾರು 500 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇನ್ನೂ ಹೆಚ್ಚು ಕೋವಿಡ್ ಪಾಸಿಟಿವ್ ಬರುವ ಶಂಕೆ ವ್ಯಕ್ತವಾಗಿದೆ.

ಒಂದೇ ಗ್ರಾಮದ 70ಕ್ಕೂ ಹೆಚ್ಚು ಜನರಿಗೆ ಕೊರೊನಾ, ನಿಷೇಧಾಜ್ಞೆ ಜಾರಿ

ಕೊರೊನಾ ಸೋಂಕಿನಿಂದ ಬಿನ್ನಾಳ ಗ್ರಾಮದ ಓರ್ವ ವ್ಯಕ್ತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಗ್ರಾಮದ ಕೆಲವರು ಗದಗ ಜಿಲ್ಲೆಯ ರೋಣಕ್ಕೆ ಮದುವೆಗೆ ಹೋಗಿದ್ದರು. ಮದುವೆಗೆ ಹೋಗಿ ಬಂದ ಬಳಿಕ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್​ನಲ್ಲಿ 70 ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿದೆ.

Last Updated : May 1, 2021, 7:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.