ETV Bharat / state

ಅಜೀಂ ಪ್ರೇಮ್‌ಜೀ ಫೌಂಡೇಶನ್‌ಗೆ ಕೊಪ್ಪಳದಲ್ಲಿ ಕೊರೊನಾ ವಾರಿಯರ್ಸ್ ಧನ್ಯವಾದ - ಕೊಪ್ಪಳದಲ್ಲಿ ಕೊರೊನಾ ವಾರಿಯರ್ಸ್​ನಿಂದ ಧನ್ಯವಾದ ಸಮರ್ಪಣೆ

ತಾಲೂಕಿನ ಗೋನಾಳ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 'ಥ್ಯಾಂಕ್ಸ್ ಟು ಅಜೀಂ ಪ್ರೇಮ್​ಜಿ ಫೌಂಡೇಶನ್' ಎಂಬ ಇಂಗ್ಲಿಷ್ ಅಕ್ಷರಗಳ ಪ್ಲಕಾರ್ಡ್​ ಹಿಡಿದು ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲೆಯ ಪರವಾಗಿ ಸಂಸ್ಥೆಯನ್ನು ಕೃತಜ್ಞತೆ ಅರ್ಪಿಸಿದರು.

corona frontline warriors t
ಕೊಪ್ಪಳ
author img

By

Published : Jun 23, 2021, 8:58 AM IST

ಗಂಗಾವತಿ(ಕೊಪ್ಪಳ): ಲಾಕ್​ಡೌನ್ ಸಮಯದಲ್ಲಿ ಕೊಪ್ಪಳ ಜಿಲ್ಲೆಯ ಹದಿನೈದು ಸಾವಿರಕ್ಕೂ ಅಧಿಕ ಜನರಿಗೆ ತಲಾ ಒಂದು ಸಾವಿರ ಮೌಲ್ಯದ ಆಹಾರ ಪದಾರ್ಥಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ಹಂಚಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಅಂಗನವಾಡಿ ಕಾರ್ಯಕರ್ತೆಯರು ವಿಭಿನ್ನವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಕೊರೊನಾ ವಾರಿಯರ್ಸ್​ಗಳಿಂದ ಧನ್ಯವಾದ ಸಮರ್ಪಣೆ

ತಾಲೂಕಿನ ಗೋನಾಳ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 'ಥ್ಯಾಂಕ್ಸ್ ಟು ಅಜೀಂ ಪ್ರೇಮ್​ಜಿ ಫೌಂಡೇಶನ್' ಎಂಬ ಇಂಗ್ಲಿಷ್ ಅಕ್ಷರಗಳ ಪ್ಲಕಾರ್ಡ್​ ಹಿಡಿದು ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲೆಯ ಪರವಾಗಿ ಸಂಸ್ಥೆಯನ್ನು ಅಭಿನಂದಿಸಿದರು.

ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್ ಎಂದು ಗುರುತಿಸಿಕೊಂಡಿದ್ದ ತಾಲ್ಲೂಕಿನ 3,750 ಅಂಗನವಾಡಿ ಕಾರ್ಯಕರ್ತೆಯರಿಗೂ ಫೌಂಡೇಶನ್ ವತಿಯಿಂದ ತಲಾ 5 ಸ್ಯಾನಿಟೈಸರ್ ಬಾಟಲ್, 40 ತ್ರಿ ಲೇಯರ್ ಮಾಸ್ಕ್, ಗ್ಲೌಸ್ ಸೇರಿದಂತೆ 500 ರೂ. ಮೊತ್ತದ ಕಿಟ್ ನೀಡಲಾಗಿತ್ತು.

ಈ ಬಗ್ಗೆ ಮಾತನಾಡಿದ ಸಿಡಿಪಿಒ ಗಂಗಪ್ಪ, ಕೊಪ್ಪಳ ಜಿಲ್ಲೆಗೆ ಸಂಸ್ಥೆಯಿಂದ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಪ್ರಮಾಣದ ಆಹಾರ ಮತ್ತು ಸುರಕ್ಷತಾ ಪರಿಕರಗಳನ್ನು ಫೌಂಡೇಶನ್ ನೀಡಿದೆ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.