ಗಂಗಾವತಿ: ಪ್ರತೀ ವರ್ಷ ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಬೆನಕನ ಅಮಾವಾಸ್ಯೆ ಬಳಿಕ ನಡೆಯುತ್ತಿದ್ದ ಪಾಡ್ಯದ ಅಗ್ನಿಕುಂಡ ಮಹೋತ್ಸವವನ್ನು ಕೊರೊನಾ ಹಿನ್ನೆಲೆ ರದ್ದುಪಡಿಸಲಾಗಿತ್ತು.
ಗಂಗೆ ಸ್ಥಳದಿಂದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಭಕ್ತರು ಪ್ರತೀ ವರ್ಷ ದೊಡ್ಡ ಪ್ರಮಾಣದ ಮೆರವಣಿಗೆ ಮಾಡಿ ದೇವಸ್ಥಾನ ತಲುಪುತ್ತಿದ್ದರು. ಬಳಿಕ ಕೋಟೆ ವೀರಭದ್ರೇಶ್ವರನ ಮೆರವಣಿಗೆ ಮಾಡಿ ಹೊಂಡದಲ್ಲಿ ನಿಗಿನಿಗಿ ಕೆಂಡ ಹಾಯುವ ಮೂಲಕ ಅಗ್ನಿಕುಂಡ ಮಹೋತ್ಸವಕ್ಕೆ ನಾಂದಿ ಹಾಡುತಿದ್ದರು.
ಆದರೆ ಈ ಬಾರಿಯ ಕೊರೊನಾದಿಂದಾಗಿ ಕೆಂಡ ಹಾಯುವ ಪದ್ಧತಿ ರದ್ದಾಗಿ ಮೆರವಣಿಗೆಯ ಸಂದರ್ಭದಲ್ಲಿ ಪುರವಂತರು ಹೇಳುತ್ತಿದ್ದ ಒಡಪು ಗರ್ಭಗುಡಿಗೆ ಸೀಮಿತವಾಗಿತ್ತು. ಬಳಿಕ ದೇಗುಲದ ಸಮಿತಿಯವರು ಪ್ರಸಾದವನ್ನು ಭಕ್ತರ ಮನೆಗಳಿಗೆ ಕಳಿಸುವುದು ವಿಶೇಷವಾಗಿತ್ತು.