ETV Bharat / state

ಕೊರೊನಾ ತಡೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ: ನಟ ಪುನೀತ್​ ರಾಜ್​ಕುಮಾರ್​ - gangavati koppala latest news

ನಾವೆಲ್ಲರೂ ಕೋವಿಡ್-19 ಎಂಬ ಒಂದು ಚಿಕ್ಕ ಸಮಸ್ಯೆಗೆ ಸಿಲುಕಿದ್ದೇವೆ. ಸದ್ಯದ ಮಟ್ಟಿಗೆ ಈ ರೋಗಕ್ಕೆ ಇನ್ನೂ ಲಸಿಕೆ ಸಿದ್ಧವಾಗಿಲ್ಲ. ಹಾಗಾಗಿ ಪ್ರತಿಯಬ್ಬರೂ ಮುಂಜಾಗೃತೆ ವಹಿಸುವುದು ಸೂಕ್ತ ಎಂದು ನಟ ಪುನೀತ್​​ ರಾಜ್​​ಕುಮಾರ್​​ ಹೇಳಿದರು.

cooperation of each and every one can solve Covid problem : Puneeth Rajkumar
ಕೊರೊನಾ ತಡೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ: ನಟ ಪುನೀತ್​ ರಾಜ್​ಕುಮಾರ್​
author img

By

Published : Oct 22, 2020, 4:12 PM IST

ಗಂಗಾವತಿ: ಇತ್ತೀಚೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಅನು ಪ್ರಭಾಕರ್ ಪೊಲೀಸರಿಗೆ ಸಾಥ್ ನೀಡಿ ಕೊರೊನಾ ಜಾಗೃತಿ ಮೂಡಿಸಿದ ಬೆನ್ನಲ್ಲೇ, ಇದೀಗ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ ಪೊಲೀಸರ ಮನವಿ ಮೇರೆಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಕೋವಿಡ್-19 ಜಾಗೃತಿ ಅಭಿಯಾನ

ಕೆಲವು ದಿನಗಳಿಂದ ‘ಜೇಮ್ಸ್​​​’ ಸಿನಿಮಾದ ಚಿತ್ರೀಕರಣವು ಕೊಪ್ಪಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ. ಹೀಗಾಗಿ ಹಲವು ಸಿನಿಮಾ ತಾರೆಯರು ಗಂಗಾವತಿ ನಗರಕ್ಕೆ ಆಗಮಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕ ನಟನಾಗಿ ಪುನೀತ್ ಅಭಿನಯಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೋವಿಡ್​​ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪೊಲೀಸ್​ ಇಲಾಖೆ ಮುಂದಾಗಿದ್ದು, ಕೊಪ್ಪಳ ಜಿಲ್ಲಾ ಪೊಲೀಸ್​​​ ತಂಡದೊಂದಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಕೋವಿಡ್-19 ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

ಈ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿರುವ ಪುನೀತ್​​​ ರಾಜ್​​ಕುಮಾರ್​​, ನಾವೆಲ್ಲರೂ ಕೋವಿಡ್-19 ಎಂಬ ಒಂದು ಚಿಕ್ಕ ಸಮಸ್ಯೆಗೆ ಸಿಲುಕಿದ್ದೇವೆ. ಸದ್ಯದ ಮಟ್ಟಿಗೆ ಈ ರೋಗಕ್ಕೆ ಇನ್ನೂ ಲಸಿಕೆ ಸಿದ್ಧವಾಗಿಲ್ಲ. ಹಾಗಾಗಿ ಮುಂಜಾಗೃತೆ ವಹಿಸುವುದು ಸೂಕ್ತ ಎಂದು ಜನರಲ್ಲಿ ಅರಿವು ಮೂಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.