ಗಂಗಾವತಿ(ಕೊಪ್ಪಳ): ನಗರದಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆ ಏರ್ಪಡುತ್ತಿದೆ. ಈ ಹಿನ್ನೆಲೆ ನಗರದ ಶಾದಿಮಹಲ್ನ್ನು ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಿರ್ದೇಶನದ ಮೇರೆಗೆ ನಗರಸಭೆಯ ಹಿರಿಯ ಸದಸ್ಯ ಶಾಮೀದ್ ಮನಿಯಾರ ಅಧ್ಯಕ್ಷತೆಯಲ್ಲಿರುವ ಇಲ್ಲಿನ ಬೇರೂನಿ ಮಸೀದಿಯ ಆಡಳಿತ ಮಂಡಳಿ ಇದೀಗ ಶಾದಿ ಮಹಲನ್ನು ಆಸ್ಪತ್ರೆಗೆ ನೀಡಲು ಮುಂದಾಗಿದೆ.
ನಗರದ ಸರ್ಕಾರಿ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಇದೆ. ಇದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಜನರ ಹಿತದೃಷ್ಟಿಯಿಂದ ಮಸೀದಿಯ ನಿಯಂತ್ರಣದಲ್ಲಿರುವ ಶಾದಿ ಮಹಲನ್ನು ಆಸ್ಪತ್ರೆಯನ್ನಾಗಿ ಮಾಡಲು ಅವಕಾಶ ನೀಡಬೇಕು. ಈಗಾಗಲೇ ಮಹಮ್ಮದೀಯ ಶಾದಿ ಮಹಲ್ನಲ್ಲಿ ಆಕ್ಸಿಜನ್, 30 ಹಾಸಿಗೆ ಬೆಡ್ ವ್ಯವಸ್ಥೆ ಹಾಗೂ ಜನರೇಟರ್ ಇದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಮನಿಯಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.