ETV Bharat / state

ಯತಿವರೇಣ್ಯ ಜಯತೀರ್ಥರ ಮೂಲ ವಿವಾದ: ವಿಪ್ರರಿಂದ ಪ್ರತಿಭಟನೆ - ಆನೆಗೊಂದಿಯ ನವವೃಂದಾವನ

ಯತಿವರೇಣ್ಯ ಜಯತೀರ್ಥರ ಮೂಲ ವೃಂದಾವನದ ಬಗ್ಗೆ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ನವವೃಂದಾವನ ಸೇವಾ ಸಮಿತಿ ಆಶ್ರಯದಲ್ಲಿ ಬ್ರಾಹ್ಮಣ ಸಮಾಜ ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿತು.

The Brahmin community protested
ಗಂಗಾವತಿಯಲ್ಲಿ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು
author img

By

Published : Jun 27, 2023, 9:45 PM IST

Updated : Jun 27, 2023, 10:24 PM IST

ಗಂಗಾವತಿಯಲ್ಲಿ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು

ಗಂಗಾವತಿ (ಕೊಪ್ಪಳ): ಯತಿವರೇಣ್ಯ ಜಯತೀರ್ಥರ ಮೂಲ ವೃಂದಾವನದ ಬಗ್ಗೆ ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ನವವೃಂದಾವನ ಸೇವಾ ಸಮಿತಿ ಆಶ್ರಯದಲ್ಲಿ ಬ್ರಾಹ್ಮಣ ಸಮಾಜ ಮಂಗಳವಾರ ಪ್ರತಿಭಟನೆ ನಡೆಯಿತು.

ಗಂಗಾವತಿಯ 17ನೇ ವಾರ್ಡ್​ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಆರಂಭವಾದ ಮೌನ ಪ್ರತಿಭಟನೆ, ವಾಸವಿ, ಪಂಪಾನಗರ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ವೃತ್ತದ ಮೂಲಕ ಹಾದು ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತಲುಪಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಾತನಾಡಿ, ಜಯತೀರ್ಥರ ಮೂಲ ವೃಂದಾವನ ಇರುವುದು ಆನೆಗೊಂದಿ ಸಮೀಪದ ನವ ವೃಂದಾವನ ಗಡ್ಡೆಯಲ್ಲಿ. ಆದರೆ ಕೆಲವರು ಯತಿವರೇಣ್ಯರಿಗೆ ಅಪಮಾನ ಮಾಡುವ ರೀತಿಯಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿದೆ ಎಂದು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆನೆಗೊಂದಿಯ ನವವೃಂದಾವನದಲ್ಲಿನ ಸ್ಥಳವೇ ಜಯತೀರ್ಥರ ಮೂಲ ವೃಂದಾವನ ಎಂದು ಸ್ಪಷ್ಟಪಡಿಸಿದರು.

ನವವೃಂದಾವನದಲ್ಲಿ ಜುಲೈ 6ರಿಂದ ಮೂರು ದಿನಗಳ ಕಾಲ ಜಯತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಂಡಿದ್ದು, ಈ ಹಿನ್ನೆಲೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ರಾಯರ ಮಠದ ಭಕ್ತರಿಗೆ ಸೂಕ್ತ ರಕ್ಷಣೆ ನೀಡಿ ಧಾರ್ಮಿಕ ಕಾರ್ಯಕ್ರಮ ಆಚರಣೆಗೆ ಅವಕಾಶ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ನಂತರ ತಹಶೀಲ್ದಾರ್​​ಗೆ ಮನವಿ ಸಲ್ಲಿಸಲಾಯಿತು. ನವವೃಂದಾವನ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.

ನವವೃಂದಾವನ ಗಡ್ಡೆಯಲ್ಲಿ ಪೂಜೆ: ಮಾಧ್ವ ಪಂಥದ ಅನುಯಾಯಿಗಳ ಪ್ರಮುಖ ಧಾರ್ಮಿಕ ತಾಣ ಮತ್ತು ಶ್ರದ್ಧಾ ಕೇಂದ್ರವಾದ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸುವ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಉತ್ತರಾಧಿಮಠ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮಧ್ಯ ಉದ್ಭವಿಸಿರುವ ಪೂಜೆ ವಿವಾದ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದೆ.

ಏನಿದು ವಿವಾದ? : ಜೂನ್ 6ರಿಂದ 8 ರವರೆಗೆ ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲು ಅವಕಾಶ ಕೋರಿ ಮಂತ್ರಾಲಯದ ಮಠದಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದೇ ಸಮಯಕ್ಕೆ ಅಂದರೆ ಜೂನ್ 6ರಿಂದ 8ರವರೆಗೆ ಮೂರು ದಿನಗಳ ಕಾಲ ರಘುವರ್ಯ ತೀರ್ಥರ ಮಹಿಮೋತ್ಸವ ಆಚರಣೆಗೆ ಅವಕಾಶ ಕೋರಿ ಉತ್ತರಾಧಿ ಮಠದಿಂದಲೂ ತಹಶೀಲ್ದಾರ್​ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ.

ಈಗಾಗಲೇ ಈ ಎರಡೂ ಮಠಗಳ ಮಧ್ಯೆ, ನವವೃಂದಾವನದಲ್ಲಿ ಪೂಜೆಯ ವಾರಸತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಹೈಕೋರ್ಟ್​ನಲ್ಲಿದೆ. ಇದರ ಮಧ್ಯೆ ವೃಂದಾವನಸ್ಥರಾಗಿರುವ ಯತಿಗಳ ಆರಾಧನೆಗೆ ಅವಕಾಶ ಕೋರಿ ಉಭಯ ಮಠಗಳು ಬೇಡಿಕೆ ಇಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಇದನ್ನೂಓದಿ:ಹಿಂದಿನ ಸರ್ಕಾರದ ಎಲ್ಲಾ ಅವ್ಯವಹಾರ ತನಿಖೆ ಮಾಡಿಸುತ್ತೇವೆ.. ₹ 60 ಸಾವಿರ ಕೋಟಿ ಹೊರೆಯಾದ್ರೂ ಗ್ಯಾರಂಟಿ ಯೋಜನೆ ಜಾರಿಗೆ ಬದ್ಧ: ಸಿಎಂ ಸಿದ್ದರಾಮಯ್ಯ

Last Updated : Jun 27, 2023, 10:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.