ಗಂಗಾವತಿ : ಮಳೆಗಾಲದಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು, ಅಂತರ್ಜಲ ಹೆಚ್ಚಿಸುವ ಉದ್ದೇಶಕ್ಕೆ ಕನಕಗಿರಿ ತಾಲೂಕಿನ ನಾಗಲಾಪುರ ಗ್ರಾಮದ ಅರಣ್ಯದಲ್ಲಿ 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು (ಟ್ರೆಂಚ್) ನಿರ್ಮಾಣ ಮಾಡಲಾಗಿದೆ.
![construction-of-forest-potholes-in-forest-to-increase-groundwater-at-gangavathi](https://etvbharatimages.akamaized.net/etvbharat/prod-images/kn-gvt-6-01-at-forest-area-300-trench-for-underground-water-vis-kac10005_01062021143514_0106f_1622538314_665.jpg)
80 ಜನ ಕೂಲಿಕಾರರು ಸೇರಿ ಒಂದು ವಾರದ ಅಂತರದಲ್ಲಿ ಈ ಇಂಗುಗುಂಡಿ ನಿರ್ಮಾಣ ಕಾರ್ಯ ಮಾಡಿದ್ದಾರೆ. ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಈ ಇಂಗುಗುಂಡಿಗಳು ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಅರಣ್ಯ ಪ್ರದೇಶದಲ್ಲಿನ ಮರಗಿಡಗಳಿಗೆ ನೀರೊದಗಿಸಲಿವೆ.
ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.
![construction-of-forest-potholes-in-forest-to-increase-groundwater-at-gangavathi](https://etvbharatimages.akamaized.net/etvbharat/prod-images/kn-gvt-6-01-at-forest-area-300-trench-for-underground-water-vis-kac10005_01062021143514_0106f_1622538314_669.jpg)
ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.
ಓದಿ: ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??