ETV Bharat / state

ಇವಿಎಂಗಳಲ್ಲಿ ಬಿಜೆಪಿಯವರು ಟ್ರಿಕ್ಸ್​ ಮಾಡ್ತಿದ್ದಾರೆ: ಅಮರೇಗೌಡ ಭಯ್ಯಾಪುರ ಆರೋಪ

ಎಲ್ಲ ಕಡೆ ತಮ್ಮ ಪಕ್ಷವನ್ನು ಗೆಲ್ಲಿಸಿದರೆ ಅನುಮಾನ ಬರುತ್ತದೆ ಎಂದು ಕೆಲವು ಕಡೆ ಬಿಜೆಪಿಯವರು ಟ್ರಿಕ್ಸ್ ಮಾಡ್ತಾರೆ ಎಂದು ಕಾಂಗ್ರೆಸ್​ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಆರೋಪಿಸಿದ್ದಾರೆ.

Congress Mla amar gowda patil
ಅಮರೇಗೌಡ ಭಯ್ಯಾಪುರ
author img

By

Published : Jan 9, 2020, 3:28 PM IST

ಕೊಪ್ಪಳ: ಇವಿಎಂ ಬಳಸುವಲ್ಲಿ ಬಿಜೆಪಿಯವರು ಟ್ರಿಕ್ಸ್ ಅನುಸರಿಸುತ್ತಿದ್ದಾರೆ ಎಂದು ಕುಷ್ಟಗಿ ಕ್ಷೇತ್ರದ ಕೈ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಆರೋಪಿಸಿದ್ದಾರೆ.

ಶಾಸಕ ಅಮರೇಗೌಡ ಭಯ್ಯಾಪುರ

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಮಾತನಾಡಿದ ಶಾಸಕ ಅಮರೇಗೌಡ, ಇವಿಎಂ ಬಗ್ಗೆ ಚರ್ಚೆಯಾಗಲಿ ಎಂದರು.

ನನಗೆ ಈಗಲೂ ಇವಿಎಂ ಮೇಲೆ ಅನುಮಾನವಿದೆ. ಜನರ ಮನಸ್ಸು ಮತ್ತು ಅವರ ಭಾವನೆಗೆ ವಿರುದ್ಧವಾಗಿ ಫಲಿತಾಂಶ ಬರುತ್ತಿದೆ. ಪ್ರಪಂಚದ ಅನೇಕ‌ ದೇಶಗಳಲ್ಲಿ ಇವಿಎಂ ತಿರಸ್ಕೃತವಾಗಿದೆ. ವಾಪಸ್ ಬ್ಯಾಲೆಟ್ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲ ಕಡೆ ತಮ್ಮ ಪಕ್ಷವನ್ನು ಗೆಲ್ಲಿಸಿದರೆ ಅನುಮಾನ ಬರುತ್ತದೆ ಎಂದು ಕೆಲವು ಕಡೆ ಬಿಜೆಪಿಯವರು ಟ್ರಿಕ್ಸ್ ಮಾಡ್ತಾರೆ. ಉಪಚುನಾವಣೆ ವೇಳೆ ಬಿಜೆಪಿ ನಾಯಕರೇ 6 ರಿಂದ 7 ಸ್ಥಾನ ಗೆಲ್ಲಬಹುದು ಎಂದು ಹೇಳಿದ್ದರು. ಆದರೆ, ಬಿಜೆಪಿ 12 ಸ್ಥಾನ ಗೆದ್ದಿತು‌. ಇದು ಬಿಜೆಪಿ ನಾಯಕರಿಗೂ ಅಚ್ಚರಿಯಾಯಿತು. ಭಾವನೆ ವ್ಯಕ್ತಪಡಿಸಲು ಯಾರ ಮರ್ಜಿಯೂ ಬೇಕಿಲ್ಲ. ಈಗಲೂ‌ ನಾನು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

Intro:

Body:ಕೊಪ್ಪಳ:- ಇವಿಎಂ ಬಳಸುವಲ್ಲಿ ಬಿಜೆಪಿಯವರು ಟ್ರಿಕ್ಸ್ ಅನುಸರಿಸುತ್ತಿದ್ದಾರೆ ಎಂದು ಕುಷ್ಟಗಿ ಕ್ಷೇತ್ರದ ಕೈ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಆರೋಪಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಮಾತನಾಡಿದ ಶಾಸಕ ಅಮರೇಗೌಡ, ಇವಿಎಂ ಬಗ್ಗೆ ಚರ್ಚೆಯಾಗಲಿ ಎಂದರು. ನನಗೆ ಈಗಲೂ ಇವಿಎಂ ಮೇಲೆ ಅನುಮಾನವಿದೆ. ಜನರ ಮನಸು ಮತ್ತು ಅವರ ಭಾವನೆಗೆ ವಿರುದ್ಧವಾಗಿ ಫಲಿತಾಂಶ ಬರುತ್ತಿದೆ. ಪ್ರಪಂಚದ ಅನೇಕ‌ ದೇಶಗಳಲ್ಲಿ ಇವಿಎಂ ತಿರಸ್ಕೃತವಾಗಿದೆ. ವಾಪಸ್ ಬ್ಯಾಲೆಟ್ ವ್ಯವಸ್ಥೆ ಜಾರಿಯಾಗಬೇಕು. ಎಲ್ಲ ಕಡೆ ತಮ್ಮ ಪಕ್ಷವನ್ನು ಗೆಲ್ಲಿಸಿದರೆ ಅನುಮಾನ ಬರುತ್ತದೆ ಎಂದು ಕೆಲವುಕಡೆ ಬಿಜೆಪಿಯವರು ಟ್ರಿಕ್ಸ್ ಮಾಡ್ತಾರೆ. ಉಪಚುನಾವಣೆ ವೇಳೆ ಬಿಜೆಪಿ ನಾಯಕರೇ 6 ರಿಂದ 7 ಸ್ಥಾನ ಗೆಲ್ಲಬಹುದು ಎಂದು ಹೇಳಿದ್ದರು. ಆದರೆ, ಬಿಜೆಪಿ12 ಸ್ಥಾನ ಗೆದ್ದಿತು‌. ಇದು ಬಿಜೆಪಿ ನಾಯಕರಿಗೂ ಅಚ್ಚರಿಯಾಯಿತು. ಭಾವನೆ ವ್ಯಕ್ತಪಡಿಸಲು ಯಾರ ಮರ್ಜಿಯೂ ಬೇಕಿಲ್ಲ. ಈಗಲೂ‌ ನಾನು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಬೈಟ್1:- ಅಮರೇಗೌಡ ಪಾಟೀಲ್ ಭಯ್ಯಾಪುರ, ಕುಷ್ಟಗಿ ಕ್ಷೇತ್ರದ ಕೈ ಶಾಸಕ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.