ಗಂಗಾವತಿ: ಕೆಲವು ಬಾರಿ ತಮ್ಮ ಆರೋಗ್ಯವನ್ನೂ ಕಡೆಗಣಿಸಿ ನಗರದ ರಸ್ತೆ ಗುಡಿಸಿ, ಚರಂಡಿ ಬಳಿದು ಊರಿನ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸುವ ಪೌರ ನೌಕರರ ಬಗ್ಗೆ ಬಹುತೇಕರಿಗೆ ಅಷ್ಟಕಷ್ಟೇ ಗೌರವ. ಆದರೆ ನಗರಸಭೆ ಸದಸ್ಯೆಯೊಬ್ಬರು ಇದೀಗ ಪೌರನೌಕರರನ್ನು ಗೌರವಿಸಿ ಅವರಿಂದ ಆಶೀರ್ವಾದ ಪಡೆಯುವ ಮೂಲಕ ಮೋದಿ ಹಾದಿ ತುಳಿದಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ವರ್ಷದ ಹಿಂದೆ ಪೌರಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದರು. ಇದೀಗ ಗಂಗಾವತಿ ನಗರಸಭೆಯ 22ನೇ ವಾರ್ಡ್ನ ಸದಸ್ಯೆ ಸುನಿತಾ ಶ್ಯಾವಿ, ಪೌರಕಾರ್ಮಿಕರಿಂದ ಆಶೀರ್ವಾದ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಪೌರನೌಕರರನ್ನು ತನ್ನ ಮನೆಗೆ ಆಹ್ವಾನಿಸಿದ ಸದಸ್ಯೆ, ಅವರಿಗೆ ಸೀರೆ, ಅರಿಶಿಣ, ಕುಂಕುಮ ಕೊಟ್ಟು ಗೌರವಿಸಿದ್ದಾರೆ. ಬಳಿಕ ಸಾಮೂಹಿಕವಾಗಿ ಅವರ ಪಾದಕ್ಕೆ ಸಾಂಕೇತಿಕವಾಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಇಂಟಿಗ್ರೇಟೆಡ್ ಟೌನ್ಷಿಪ್ ಯೋಜನೆ: ಪರಿಣತ ವಿವಿಗಳ ಸಹಯೋಗ ಪಡೆಯಲು ಸಿಎಂ ಸೂಚನೆ