ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಇಂದಿನಿಂದ ಮತ್ತೆ ಮೇ 30ರವರೆಗೆ ಒಂದು ವಾರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಅನಗತ್ಯವಾಗಿ ಜನರು ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ.
ಇಂದು ಬೆಳಿಗ್ಗೆ ಕೆಲವು ವಾಹನಗಳ ಓಡಾಟವಿತ್ತು. ಬಳಿಕ ರಸ್ತೆಗಿಳಿದ ಪೊಲೀಸರು ಸುಮ್ಮನೆ ಓಡಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.
![koppal](https://etvbharatimages.akamaized.net/etvbharat/prod-images/kn-kpl-01-24-complete-lockdown-visuals-ka10041_24052021080113_2405f_1621823473_625.jpg)
ನಡೆದುಕೊಂಡು ದಿನ ಪತ್ರಿಕೆ ತರಲು ಹೊರಟಿದ್ದ ಉಪನ್ಯಾಸಕ ಸಿದ್ದನಗೌಡ ಅವರನ್ನು ನಗರದ ಲೇಬರ್ ಸರ್ಕಲ್ನಲ್ಲಿ ತಡೆದ ಪೊಲೀಸರು ವಿಚಾರಿಸಿದರು. ಆಗ ಪತ್ರಿಕೆ ತರಲು ಹೊರಟಿರುವುದಾಗಿ ಅವರು ಹೇಳಿದ್ದು, ನಾವೇ ಪತ್ರಿಕೆ ತರುತ್ತೇವೆ, ನೀವು ಇಲ್ಲೇ ಇರಿ ಎಂದು ಹೇಳಿ ಪೊಲೀಸ್ ಕಾನ್ಸ್‌ಟೇಬಲ್ ಪೇಪರ್ ತಂದುಕೊಟ್ಟರು. ಅಲ್ಲದೆ ಇನ್ಮುಂದೆ ಹೊರಗಡೆ ಬರಬೇಡಿ ಎಂದು ಸೂಚಿಸಿದರು.