ಗಂಗಾವತಿ: ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನ ಅತಿವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ನಾವು ಸಾಗಬೇಕಾದರೆ ಕೇವಲ ನಡಿಗೆ ಮಾತ್ರವಲ್ಲ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಓಡುವ ಸ್ಥಿತಿಯಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ನಗರದ ಎಂಎನ್ಎಂ ಶಾಲೆಯಲ್ಲಿ ಇನ್ಸ್ಪೈರ್ ಅರ್ವಾಡ್ ಪಡೆದ ವಿದ್ಯಾರ್ಥಿಗಳಿಗೆ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲಾಮಟ್ಟದ ವಿಜ್ಞಾನ ಆಧಾರಿತ ಯೋಜನೆಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತ ಮಾತ್ರವಲ್ಲ. ವಿಶ್ವದಲ್ಲಿ ವಿಜ್ಞಾನ-ತಂತ್ರಜ್ಞಾನಗಳದ್ದೇ ಕಾರುಬಾರು. ಅದಕ್ಕೆ ಹೊಂದಿಕೊಳ್ಳಬೇಕಾದರೆ ನಾವು ಅನಿವಾರ್ಯವಾಗಿ ಅಧುನಿಕ ಅವಿಷ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.