ಗಂಗಾವತಿ: ನಗರಸಭೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷೆ ಮಾಲಾಶ್ರೀ ಹಾಗೂ ಉಪಾಧ್ಯಕ್ಷೆ ಸುಧಾ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ರಸ್ತೆಯಲ್ಲಿ ಕಸ ಗುಡಿಸಿ ಎಲ್ಲರ ಗಮನ ಸೆಳೆದರು.
ಈ ಸುದ್ದಿಯನ್ನೂ ಓದಿ: ಆರಕ್ಷಕರ ಆಯಾಸ ತಣಿಸಲು ಪೊಲೀಸ್ ಇಲಾಖೆಯಿಂದ ಜಲ ಕ್ರೀಡೆ ತರಬೇತಿ
ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ಕೆ ಕಸಗುಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಶಾಮೀದ ಮನಿಯಾರ, ಮನೋಹರಸ್ವಾಮಿ, ಪೌರಾಯುಕ್ತ ಜಮಖಂಡಿ ಮೊದಲಾದವರು ಸಾಥ್ ನೀಡಿದರು.