ETV Bharat / state

ಅಬ್ಬಬ್ಬಾ!! ಎಂಥಾ ಧೈರ್ಯ.. ಮಕ್ಕಳಿಗೆ ಆಟಿಕೆಯಾದ ಜೀವಂತ ಹಾವುಗಳು.. ವಿಡಿಯೋ ವೈರಲ್​​ - ಹಾವಿನ ಮರಿಗಳೊಂದಿಗೆ ಮಕ್ಕಳು ಆಟವಾಡುತ್ತಿರುವ ವಿಡಿಯೋ ವೈರಲ್

ತೀರ ವಿಷಕಾರಿ ಎನಿಸಿದ ರಸ್ಸೆಲ್ ವೈಪರ್ ಮರಿ ಹಾವುಗಳನ್ನು ತಮ್ಮ ಮಕ್ಕಳೊಂದಿಗೆ ದೂರದ ಪ್ರದೇಶಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಈ ಹಾವಿನ ಮರಿಗಳನ್ನು ಮಕ್ಕಳು ಅಂಜಿಕೆ, ಅಳುಕಿಲ್ಲದೇ ಹಿಡಿದು ಕಾಡಿಗೆ ಬಿಟ್ಟಿರುವ ಬಗ್ಗೆ ಚಾಂದಪಾಷಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದೆ..

ಮಕ್ಕಳಿಗೆ ಆಟಿಕೆಯಂತಾದ ಜೀವಂತ ಹಾವಿನ ಮರಿಗಳು
ಮಕ್ಕಳಿಗೆ ಆಟಿಕೆಯಂತಾದ ಜೀವಂತ ಹಾವಿನ ಮರಿಗಳು
author img

By

Published : Dec 12, 2021, 9:46 PM IST

ಕುಷ್ಟಗಿ( ಕೊಪ್ಪಳ): ಮಕ್ಕಳಿಗೆ ಜೀವಂತ ಮರಿ ಹಾವುಗಳು ಆಟಿಕೆ ವಸ್ತುಗಳಾಂತಾಗಿವೆ. ಕುಷ್ಟಗಿ ಪಟ್ಟಣದ ಹೊರವಲಯದ ಸಜ್ಜೆ ಗೂಡಿನಲ್ಲಿದ್ದ ಎಂಟು ಹಾವಿನ ಮರಿಗಳನ್ನ ಸ್ನೇಕ್ ಸ್ನೇಹಿ ಚಾಂದಪಾಷಾ ಹಾವಾಡಿಗ ಅವರಿಗೆ ಸಿಕ್ಕಿದ್ದು, ಅವರ ಮಕ್ಕಳು ಈ ಹಾವಿನ ಮರಿಗಳನ್ನ ಯಾವುದೇ ಅಳುಕಿಲ್ಲದೆ ಹಿಡಿದು ಆಟವಾಡಿದ್ದಾರೆ.

ಸಂತ ಶಿಶುನಾಳ ಶರೀಫ ನಗರದಲ್ಲಿರುವ ಹಾವಾಡಿಗ ಚಾಂದಪಾಷಾ ಅವರಿಗೆ, ಸಜ್ಜೆ ಗೂಡಿನಲ್ಲಿ ಹಾವಿನ ಮರಿಗಳಿರುವ ಬಗ್ಗೆ ಕರೆ ಬಂದಿದೆ. ಕೂಡಲೇ ಗಜೇಂದ್ರಗಡ ರಸ್ತೆಯಲ್ಲಿರುವ ಈದ್ಗಾ ಮೈದಾನದ ಬಳಿ ರೈತರ ಜಮೀನಿನಲ್ಲಿದ್ದ ಸಜ್ಜೆ ಗೂಡು ತೆರವುಗೊಳಿಸಿದಾಗ ಎಂಟು ರಸ್ಸೆಲ್ ವೈಪರ್ (Russell's Viper) ಹಾವಿನ ಮರಿಗಳು ಸಿಕ್ಕಿವೆ.

ಎಂಥಾ ಧೈರ್ಯ ಇದೆ ಈ ಮಕ್ಕಳಿಗೆ..

ಹಾಗೆಯೇ, ನಾಗರಹಾವು ಸಹ ಪತ್ತೆಯಾಗಿದೆ. ಕೂಡಲೇ ರಸ್ಸೆಲ್ ವೈಪರ್ ಎಂಟು ಹಾವಿನ ಮರಿ ಸಹಿತ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ತೀರ ವಿಷಕಾರಿ ಎನಿಸಿದ ರಸ್ಸೆಲ್ ವೈಪರ್ ಮರಿ ಹಾವುಗಳನ್ನು ತಮ್ಮ ಮಕ್ಕಳೊಂದಿಗೆ ದೂರದ ಪ್ರದೇಶಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಈ ಹಾವಿನ ಮರಿಗಳನ್ನು ಮಕ್ಕಳು ಅಂಜಿಕೆ, ಅಳುಕಿಲ್ಲದೇ ಹಿಡಿದು ಕಾಡಿಗೆ ಬಿಟ್ಟಿರುವ ಬಗ್ಗೆ ಚಾಂದಪಾಷಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದೆ.

ಈ ಕುರಿತು ಮಾತನಾಡಿದ ಹಾವಾಡಿಗ ಚಂದಪಾಷಾ ಅವರು, ಈ ಮರಿ ಹಾವುಗಳನ್ನು ಕುರುಡು ಪಂಜ್ರಾ ಎನ್ನುತ್ತಾರೆ. ಇವು ಕೆಟ್ಟ ಹಾವಾಗಿದ್ದು, ದೊಡ್ಡ ಹಾವುಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಈ ಮರಿ ಹಾವು ಹಾಗೂ ನಾಗರಹಾವನ್ನು ಕಾಡಿಗೆ ಬಿಟ್ಟಿದ್ದೇನೆ. ಹಾವಿನ ಮರಿಗಳನ್ನು ನಮ್ಮ ಮಕ್ಕಳು ಹಿಡಿದಿದ್ದಾರೆ. ಮರಿ ಹಾವುಗಳು ಬಾಯಿ ತೆಗೆಯುವುದಿಲ್ಲ. ಹೀಗಾಗಿ, ಕಚ್ಚುವುದಿಲ್ಲ ಎಂದರು.

ಇದನ್ನೂ ಓದಿ : ಪತ್ನಿಯನ್ನ ಚುಡಾಯಿಸಿದ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಮೈಸೂರಲ್ಲಿ ಡಬಲ್​ ಮರ್ಡರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.