ಗಂಗಾವತಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್ಟಿಇ) ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಕೂಡಲೇ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್ಟಿಇ ವಿದ್ಯಾರ್ಥಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ಟಿಇ ಸಲಹೆಗಾರ ಚಂದ್ರಕಾಂತ್ ಬಂಡಾರಿ, ನಮ್ಮ ಉದ್ದೇಶ ಪಾಲಕರನ್ನು ಜಾಗೃತಗೊಳಿಸುವುದು ಮತ್ತು ಸ್ಥಗಿತವಾಗಿರುವ ಆರ್ಟಿಇ ಪ್ರವೇಶವನ್ನು ಮತ್ತೆ ಮುಂದುವರೆಸುವಂತೆ ಹೋರಾಟ ಮಾಡುವುದು ಎಂದರು.
ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಈ ಯೋಜನೆಯಿಂದ ಬಡ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ಶೇ.25ರಷ್ಟು ಸೀಟು ಮೀಸಲು ಮಾಡುವಂತೆ ನಮ್ಮ ಹೋರಾಟ ಇದೆ ಎಂದರು.