ಗಂಗಾವತಿ: ಆನೆಗೊಂದಿ ಉತ್ಸವದ ಅಂಗವಾಗಿ ಈ ಬಾರಿ ಆಯೋಜಿಸಲು ಉದ್ದೇಶಿಸಿರುವ ಆನೆಗೊಂದಿ ಬೈಸ್ಕೈ ಯೋಜನೆಯ ಭಾಗವಾಗಿ ಅಧಿಕಾರಿಗಳು ಹಾಗೂ ತಜ್ಞರ ತಂಡ ಕಡೆಬಾಗಿಲು ಬಳಿ ಇರುವ ನಿಯೋಜಿತ ಹೆಲಿಪ್ಯಾಡ್ ಸ್ಥಳ ಪರಿಶೀಲನೆ ಮಾಡಿತು.
ಬೆಂಗಳೂರಿನ ಖಾಸಗಿ ಹೆಲಿ ಟೂರಿಸಂ ಸಂಸ್ಥೆಯೊಂದು ಆನೆಗೊಂದಿ ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆನೆಗೊಂದಿಯನ್ನು ಹೆಲಿಕಾಪ್ಟರ್ ಮೂಲಕ ತೋರಿಸುವ ವಿಶೇಷ ಯೋಜನೆ (ಬೈಸ್ಕೈ) ರೂಪಿಸಿದೆ. ಇದಕ್ಕಾಗಿ ಸ್ಥಳ, ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಕಾಂತ್, ಕಂದಾಯ ನಿರೀಕ್ಷಕ ಮಂಜುನಾಥ, ಪ್ರವಾಸೋದ್ಯಮ ಉಪ ನಿರ್ದೇಶಕ ಮೋತಿಲಾಲ್, ಪಿಡಬ್ಲ್ಯೂಡಿ ಸಿಬ್ಬಂದಿ ಸುರೇಶ, ಸಹಾಯಕ ಇಂಜಿನಿಯರ್ ದೀಪಾ, ಹಂಪಿ ಪ್ರಾಧಿಕಾರದ ಯಮುನಾ ನಾಯ್ಕ್, ಡಿವೈಎಸ್ಪಿ ಚಂದ್ರಶೇಖರ್, ಗ್ರಾಮೀಣ ಸಿಪಿಐ ದೊಡ್ಡಪ್ಪ ಇದ್ದರು.