ETV Bharat / state

ಮದುವೆಯಾಗುವುದಾಗಿ ನಂಬಿಸಿ ಮೋಸ: ಕೊಪ್ಪಳ ಎಸ್​ಪಿ ಕಚೇರಿಯ PSI ವಿರುದ್ಧ ಆರೋಪ - Cheating for women

ಕೊಪ್ಪಳ ಎಸ್​ಪಿ ಕಚೇರಿಯ ಬೆರಳಚ್ಚು(Fingerprint) ವಿಭಾಗದ ಪಿಎಸ್ಐ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಗೆ ಮೋಸ ಮಾಡಿದ್ದಾರೆ. ಪಿಎಸ್ಐ ಮುತ್ತಣ್ಣ ಬಡಿಗೇರ್ ಎಂಬುವರ ವಿರುದ್ಧ ಈ ಆರೋಪ ಕೇಳಿ ಬಂದಿದೆ.

SP T. Sridhar
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್
author img

By

Published : Dec 19, 2021, 2:21 PM IST

ಕೊಪ್ಪಳ: ನಗರದ ಎಸ್​​ಪಿ ಕಚೇರಿಯ ಬೆರಳಚ್ಚು(Fingerprint) ವಿಭಾಗದ ಪಿಎಸ್ಐವೊಬ್ಬರು ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾಹಿತಿ ನೀಡಿರುವುದು

ಪಿಎಸ್ಐ ಮುತ್ತಣ್ಣ ಬಡಿಗೇರ್ ಎಂಬುವರ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೋಸ ಹೋಗಿರುವ ಮಹಿಳೆ ಹಾಗೂ ಕುಟುಂಬದವರು ನಿನ್ನೆ(ಶನಿವಾರ) ನ್ಯಾಯ ಕೇಳಲೆಂದು ಎಸ್​ಪಿ ಕಚೇರಿಗೆ ಬಂದು ಮೌಖಿಕ ದೂರು ನೀಡಿದ್ದಾರೆ. ಆದರೆ ನಗರ ಠಾಣೆಯ ಪಿಐ ಅವರನ್ನು ಮನವೊಲಿಸಿ ಊರಿಗೆ ಕಳುಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಸ್​ಪಿ ಕಚೇರಿಯಿಂದ ಪಿಎಸ್ಐ ಮುತ್ತಣ್ಣ ಪರಾರಿ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಮುತ್ತಣ್ಣ ಬಡಿಗೇರ್ ವರ್ತನೆಗೆ ಎಸ್​ಪಿ ಟಿ. ಶ್ರೀಧರ್ ಅವರು ಗರಂ ಆಗಿದ್ದಾರೆ. ಅಲ್ಲದೇ ಮುತ್ತಣ್ಣನ ವಿರುದ್ಧ ಕ್ರಮ ಕೈಗೊಳ್ಳುವಂತೆ‌ ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್, ದೂರು ನೀಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.