ETV Bharat / state

ಕುಷ್ಟಗಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:  ಸರಗಳ್ಳನ ಬಂಧಿಸಿದ ಪೊಲೀಸರು - Kustagi police station

ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಕುಷ್ಟಗಿ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

Kustagi police station
ಕುಷ್ಟಗಿ ಪೊಲೀಸ್ ಠಾಣೆ
author img

By

Published : Mar 13, 2021, 5:01 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ಹೊರವಲಯದ ಕೃಷ್ಟಗಿರಿ ಕಾಲೋನಿ ಬಳಿ ಮಹಿಳೆಯ ಚಿನ್ನದ ಸರ ಎಗರಿಸಿದ್ದ ಸರಗಳ್ಳನನ್ನು ಕೆಲವೇ ತಾಸುಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೃಷ್ಟಗಿರಿ ಕಾಲೋನಿಯ ಅಂಡರ್ ಪಾಸ್ ಬಳಿ ಮಹಿಳೆಯ ಕತ್ತಿನಲ್ಲಿದ್ದ ಸರಗಳ್ಳ ಅಪಹರಿಸಿದ್ದ ಸಂದರ್ಭದಲ್ಲಿ ಮಹಿಳೆ ಚೀರಾಡಿ ಬೊಬ್ಬೆ ಮಾಡಿದ್ದಾಳೆ. ಅಲ್ಲಿದ್ದ ಸ್ಥಳೀಯರು ಸರಗಳ್ಳನನ್ನು ಬೆನ್ನಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸಹ ಸರಗಳ್ಳನ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

ಸದರಿ ಆರೋಪಿ ವಿಜಯಪುರ ಮೂಲದ ಮಂಜುನಾಥ ಗುಡಿಮನಿ ಎಂದು ಗುರುತಿಸಲಾಗಿದ್ದು, ಆರೋಪಿಯ ವಿಚಾರಣೆ ನಡೆಯುತ್ತಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.