ETV Bharat / state

ಪಕ್ಷದ ವಿಪ್ ಉಲ್ಲಂಘಿಸಿದ ಪ್ರಕರಣ: ಡಿಸಿ ಕೋರ್ಟಿಗೆ ಹಾಜರಾಗಲಿರುವ ಕೈ ಸದಸ್ಯರು - ಪಕ್ಷದ ವಿಪ್ ಉಲ್ಲಂಘಿಸಿದ ಪ್ರಕರಣ

ಆ.27 ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಇವರು ತಮ್ಮ ಪಕ್ಷದ ವಿರುದ್ಧ ಬಂಡಾಯವೆದ್ದು, ಬಿಜೆಪಿಗೆ ಮತ ಚಲಾಯಿಸಿದ್ದ ಇಬ್ಬರು ಕಾಂಗ್ರೆಸ್​ ಸದಸ್ಯರಿಗೆ ವಿಪ್​ ಜಾರಿ ಮಾಡಲಾಗಿದೆ. ಇಂದು ಇಬ್ಬರು ಕೈ ಸದಸ್ಯರು ಡಿಸಿ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.

ಕುಷ್ಟಗಿ ಪುರಸಭೆ
Municipality of Kushtagi
author img

By

Published : Mar 31, 2021, 8:40 AM IST

ಕುಷ್ಟಗಿ (ಕೊಪ್ಪಳ): ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕುಷ್ಟಗಿ ಪುರಸಭೆಯ ಇಬ್ಬರು ಕೈ ಸದಸ್ಯರಿಗೆ ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದೆ.

ಕುಷ್ಟಗಿ ಪಟ್ಟಣ 3ನೇ ವಾರ್ಡ್​​​ನ ಸದಸ್ಯ ಗೀತಾ ಶರಣಪ್ಪ ತುರಕಾಣಿ ಹಾಗೂ 17ನೇ ವಾರ್ಡ್​​​ನ ಸದಸ್ಯ ವೀರೇಶ್​​ ಬೆದವಟ್ಟಿ ಅವರಿಗೆ ಈ ನೋಟಿಸ್ ಜಾರಿ ಮಾಡಲಾಗಿದೆ.

notice copy
ನೋಟಿಸ್​ ಪ್ರತಿ

ಆ.27 ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಇವರು ತಮ್ಮ ಪಕ್ಷದ ವಿರುದ್ಧ ಬಂಡಾಯವೆದ್ದು ಬಿಜೆಪಿಯ ಗಂಗಾಧರಸ್ವಾಮಿ ಹಿರೇಮಠ ಹಾಗೂ ಪಕ್ಷೇತರ ಸದಸ್ಯೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರ ಪರ ಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಹ ಬಹುಮತ ಇದ್ದಾಗ್ಯೂ ಆಡಳಿತ ನಡೆಸುವುದಕ್ಕೆ ಹಿನ್ನೆಡೆ, ಮುಜಗುರ ಉಂಟಾಗಿತ್ತು.

ಕಾಂಗ್ರೆಸ್ ಪಕ್ಷದಿಂದ ಜಿಲ್ಲಾಧಿಕಾರಿಗೆ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 6ನೇ ವಾರ್ಡ್​​ ಸದಸ್ಯ ರಾಮಣ್ಣ ಬಿನ್ನಾಳ ಅವರು ಸದರಿ ಸದಸ್ಯರ ಸದಸ್ಯತ್ವ ರದ್ದತಿಗೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.