ಗಂಗಾವತಿ ರಸ್ತೆಯಲ್ಲಿರುವ ಕೊಪ್ಪಳ ಮೆಡಿಕಲ್ ಕಾಲೇಜ್ ಬಳಿ ಈ ದುರ್ಘಟನೆ ಸಂಭವಿಸಿದೆ. ಅಸ್ಸೋಂ ಮೂಲದ ಪೂರ್ಣೋಜಾಯ್ (23) ಎಂಬಾತ ಮೃತಪಟ್ಟ ಸೆಕ್ಯೂರಿಟಿ ಗಾರ್ಡ್. ಗಂಗಾವತಿಯಿಂದ ಕೊಪ್ಪಳಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮೆಡಿಕಲ್ ಕಾಲೇಜ್ ಬಳಿ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಬಸ್ ಅಡಿ ಸಿಲುಕಿದ ಪೂರ್ಣೋಜಾಯ್ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಆತನ ದೇಹ ಅಪ್ಪಚ್ಚಿಯಾಗಿದೆ. ಮೃತ ದುರ್ದೈವಿ ಇಲ್ಲಿ ಎರಡು ದಿನಗಳ ಹಿಂದೆಯಷ್ಟೆ ಸೆಕ್ಯೂರಿಟಿ ಕೆಲಸಕ್ಕಾಗಿ ಬಂದಿದ್ದ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.