ಗಂಗಾವತಿ: ಕರಾಟೆ ಲೋಕದ ಧೃವತಾರೆ ಬ್ರೂಸ್ ಲೀ ಅವರ ಜನ್ಮ ದಿನಾಚರಣೆಯನ್ನು ತಾಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಶಾಲೆಯ ಆವರಣದಲ್ಲಿ ಚಿಕ್ಕಬೆಣಕಲ್ನ ಬಿ ಎಲ್ ಬುಲ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಕರಾಟೆ ತರಬೇತಿದಾರ ಮಂಜುನಾಥ ರಾಠೋಡ ಮಾತನಾಡಿ, ಕುಂಗ್ ಫೂ ಮತ್ತು ಕರಾಟೆಯ ಪಿತಾಮಹ ಬ್ರೂಸ್ ಲೀ ಅವರ ಕೊಡುಗೆ ಅಪಾರ. ಆತ್ಮರಕ್ಷಣೆಯ ಕಲೆ ಎಂದು ಗುರುತಿಸಲ್ಪಟ್ಟಿರುವ ಮಾರ್ಷಲ್ ಆರ್ಟ್ ಇಂದು ಜಗತ್ತಿನಾದ್ಯಂತ ಪರಿಚಿತವಾಗಿದೆ ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ವೀರೇಶ ಅಂಗಡಿ, ಕಾರ್ಯದರ್ಶಿ ಮೈನುದ್ದೀನ್, ರಾಜಾಸಾಬ, ರಾಧಾಕೃಷ್ಣ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಚಿತ್ರಲೇಖ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಕರಾಟೆ ಕಲಿಸಲಾಯಿತು.