ETV Bharat / state

ಆಸ್ತಿಗಾಗಿ ಮೂವರು ಸಹೋದರರ ಕಿತ್ತಾಟ : ಗುಂಡೇಟಿಗೆ ಓರ್ವ ಬಲಿ - murder for property

ಆಸ್ತಿಗಾಗಿ ಸಹೋದರರ ನಡುವೆ ಕಿತ್ತಾಟವಾಗಿದ್ದು, ಇಂದು ಅಣ್ಣ ರಾಘವೇಂದ್ರ ತನ್ನಿಬ್ಬರು ಸಹೋದರರ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಓರ್ವ ಸಹೋದರ ಮೃತಪಟ್ಟಿದ್ದಾನೆ..

murder in koppala
ಕೊಪ್ಪಳದಲ್ಲಿ ಕೊಲೆ
author img

By

Published : Jun 4, 2022, 5:41 PM IST

Updated : Jun 4, 2022, 6:51 PM IST

ಕೊಪ್ಪಳ : ಕೊಪ್ಪಳ ತಾಲೂಕಿನ ಕವಲೂರ ಗ್ರಾಮದಲ್ಲಿಂದು ಆಸ್ತಿಗಾಗಿನ ದಾಯಾದಿ ಕದನದಲ್ಲಿ ಅಣ್ಣನೊಬ್ಬ ತಮ್ಮನಿಗೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ. ವಿನಾಯಕ ಎಂಬಾ ಮೃತ ಸೋದರನಾಗಿದ್ದಾನೆ.

ಕವಲೂರ ಗ್ರಾಮದ ಕವನ ಮನೋಹರ ದೇಸಾಯಿ ಎಂಬುವರಿಗೆ ಒಟ್ಟು 150 ಎಕರೆ ಜಮೀನು ಇದೆ. ಅವರಿಗೆ ರಾಘವೇಂದ್ರ ದೇಸಾಯಿ. ವಿನಾಯಕ ದೇಸಾಯಿ, ಯೋಗೀಶ್‌ ದೇಸಾಯಿ ಎಂಬ ಮೂವರು ಮಕ್ಕಳಿದ್ದರು. ಯೋಗೀಶ್‌ ಹಾಗೂ ವಿನಾಯಕ ಎಂಬುವರು ಬೆಂಗಳೂರಿನ ಹೈಕೋರ್ಟ್​ನಲ್ಲಿ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದರು. ತಂದೆ ಕವಲೂರಿನಲ್ಲೇ ವಾಸವಾಗಿದ್ದಾರೆ.

ಕೊಪ್ಪಳದಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ..

ಈ ಮೂವರು ಮಕ್ಕಳ ಮಧ್ಯೆ ಆಸ್ತಿಗಾಗಿ ಆಗಾಗ ಜಗಳವಾಗುತ್ತಿತ್ತು. ಜಮೀನಿಗೆ ಸಂಬಂಧಿಸಿದಂತೆ ವಿವಾದವೊಂದು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ವಿಚಾರಣೆಯ ಹಂತದಲ್ಲಿದ್ದ ಈ ಜಮೀನಿನಲ್ಲಿ ಉಳುಮೆ ಮಾಡಬಾರದು ಎಂದು ನ್ಯಾಯಾಲಯ ತಿಳಿಸಿತ್ತು. ಆದರೆ, ರಾಘವೇಂದ್ರ ಅವರು ಹೆಸರು ಬಿತ್ತನೆ ಮಾಡಿದ್ದರಿಂದ ಇನ್ನುಳಿದ ಇಬ್ಬರು ತಮ್ಮಂದಿರು ಸಿಟ್ಟಾಗಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣಾರ್ಭಟ : 4 ದಿನ ಯೆಲ್ಲೋ ಅಲರ್ಟ್, ಹಲವೆಡೆ ಮರಗಳು ಧರಾಶಾಹಿ

ಇಂದು ವಿನಾಯಕ ಹಾಗೂ ಯೋಗೀಶ್‌ ಹೊಲಕ್ಕೆ ಬಂದು ಟ್ರ್ಯಾಕ್ಟರ್ ಮೂಲಕ ಹೆಸರು ಬೆಳೆಯನ್ನು ನಾಶ ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ರಾಘವೇಂದ್ರ ಡಬಲ್ ಬ್ಯಾರೆಲ್ ಗನ್​ನೊಂದಿಗೆ ಬಂದು ಅವರ ಮೇಲೆ ಗುಂಡು ಹಾರಿಸಿದ್ದಾನೆ.

ಗಾಯಗೊಂಡ ವಿನಾಯಕ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿದ್ದರೆ, ಯೋಗೀಶ್‌ನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : Jun 4, 2022, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.