ಕುಷ್ಟಗಿ (ಕೊಪ್ಪಳ) : ಕ್ಯಾದಿಗುಪ್ಪ ಕ್ರಾಸ್ನ ಮಹಾರಾಣಿ ಡಾಬಾದ ಬಳಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ತೀವ್ರ ಅಸ್ವಸ್ಥನಾಗಿ ಒದ್ದಾಡುತ್ತಿದ್ದ ಯುವಕನಿಗೆ ಸ್ಥಳೀಯರು ನೀರು ಹಾಕುವಷ್ಟರಲ್ಲಿ ಆತ ಬಿಕ್ಕಳಿಕೆಯಿಂದ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುಷ್ಟಗಿ-ಹುನಗುಂದ ರಾಷ್ಟ್ರೀಯ ಹೆದ್ದಾರಿ ಕ್ಯಾದಿಗುಪ್ಪ ಕ್ರಾಸ್ನ ಮಹಾರಾಣಿ ಡಾಬಾದ ಬಳಿ ಯುವಕ ಮೃತ ಪಟ್ಟಿದ್ದು, ಈತ ತಮಿಳುನಾಡು ಮೂಲದವನೆಂದು ತಿಳಿದು ಬಂದಿದೆ. ಆತನ ಜೇಬಿನಲ್ಲಿ ಗುರುತಿನ ಪತ್ರದಿಂದ ಈ ವಿಚಾರ ಗೊತ್ತಾಗಿ, ಕೊರೊನಾ ಭೀತಿ ವ್ಯಕ್ತವಾಗಿದೆ. ಜನ ಶವವನ್ನು ಮುಟ್ಟಲು ಹಿಂಜರಿದಿರುವುದು ಕಂಡು ಬಂತು.
ನಂತರ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಮೃತ ಯುವಕನ ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಮೃತ ಯುವಕ ತಮಿಳುನಾಡಿನವನು ಎನ್ನುವುದು ಮಾತ್ರ ಗೊತ್ತಾಗಿದ್ದು, ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.