ETV Bharat / state

ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದ್ರೆ ಬಿಜೆಪಿ ನೀಡಿರುವ ಮೀಸಲಾತಿ ಹಿಂಪಡೆಯುತ್ತಾರೆ : ಯತ್ನಾಳ್​​ - ಈಟಿವಿ ಭಾರತ ಕನ್ನಡ

ಬಿಜೆಪಿಗೆ ಹೆಚ್ಚಿನ ಪ್ರಚಾರಕರು ಬೇಕಿಲ್ಲ. ಕಾಂಗ್ರೆಸ್​ನ​​ ಇಬ್ಬರು ಪ್ರಚಾರಕರು ಸಾಕು. ರಾಹುಲ್ ಬಂದರೆ ಕಾಂಗ್ರೆಸ್​ ಪಕ್ಷ ನಾಶವಾಗುತ್ತದೆ. ಸಿದ್ದರಾಮಯ್ಯರಂತೂ ಬಿಜೆಪಿ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವ್ಯಂಗ್ಯವಾಡಿದರು.

bjp-leader-yathnal-slams-congress-in-gangavathi
ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿರುವ ಮೀಸಲಾತಿಯನ್ನು ಹಿಂಪಡೆಯುತ್ತಾರೆ : ಯತ್ನಾಳ್​​
author img

By

Published : May 4, 2023, 6:42 PM IST

ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿರುವ ಮೀಸಲಾತಿಯನ್ನು ಹಿಂಪಡೆಯುತ್ತಾರೆ : ಯತ್ನಾಳ್​​

ಗಂಗಾವತಿ(ಕೊಪ್ಪಳ): ಕಾಂಗ್ರೆಸ್​​ನವರು ಬಿಜೆಪಿ ಸರ್ಕಾರ ಮಾಡಿರುವ ಎಲ್ಲಾ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಹೇಳುತ್ತಾರೆ. ಎಲ್ಲ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಇಂಥವರಿಗೆ ಮತ ಹಾಕುತ್ತೀರಾ ಎಂದು ಬಿಜೆಪಿ ​ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.

ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ಮನೆಗೆ ಕಳುಹಿಸದಿದ್ದರೆ ದೇಶ ವಿಭಜನೆಯಾಗುತ್ತದೆ ಎಂದು ಕಾಂಗ್ರೆಸ್​ನವರು ಬೊಬ್ಬಿಡುತ್ತಾರೆ. ಇನ್ನೊಂದೆಡೆ ಭಾರತ್ ಜೋಡೋ ಯಾತ್ರೆ ಮಾಡುತ್ತಾರೆ. ವಾಸ್ತವದಲ್ಲಿ ಪಾಕಿಸ್ತಾನ, ಬಾಂಗ್ಲಾ ವಿಭಜನೆ ಮಾಡಿದ್ದು ಮತ್ತು ಜಮ್ಮು ಕಾಶ್ಮೀರವನ್ನು ನಾಶ ಮಾಡಿದ್ದು ಕಾಂಗ್ರೆಸ್​​ ಎಂದು ವಾಗ್ದಾಳಿ ನಡೆಸಿದರು.

ಮೋದಿಜಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಒಂದೇ ಒಂದು ಇಂಚು ಜಾಗವನ್ನು ನಾವು ಯಾರಿಗೂ ಬಿಟ್ಟುಕೊಟ್ಟಿಲ್ಲ. ಆದರೆ ರಾಹುಲ್ ಗಾಂಧಿ ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಯಾವುದೇ ದಾಖಲೆ ಇಲ್ಲದೇ ಮಾತನಾಡುವ ವ್ಯಕ್ತಿ ಎಂದು ರಾಹುಲ್ ವಿರುದ್ಧ ಯತ್ನಾಳ್​ ಹರಿಹಾಯ್ದರು. ರಾಹುಲ್ ಬಿಜಾಪುರಕ್ಕೆ ಬಂದಿದ್ದರು. ರಾಹುಲ್ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ನಾಶವಾಗಿದೆ. ಬಿಜೆಪಿಗೆ ಹೆಚ್ಚಿನ ಪ್ರಚಾರಕರು ಬೇಕಿಲ್ಲ. ಕಾಂಗ್ರೆಸ್​ನ​​ ಇಬ್ಬರು ಪ್ರಚಾರಕರು ಸಾಕು. ರಾಹುಲ್ ಬಂದರೆ ಕಾಂಗ್ರೆಸ್​ ಪಕ್ಷ ನಾಶವಾಗುತ್ತದೆ. ಸಿದ್ದರಾಮಯ್ಯರಂತೂ ಬಿಜೆಪಿ ಪರವಾಗಿಯೇ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನನ್ನನಂತೂ ಸಿಎಂ ಮಾಡಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ. ತಿಹಾರ್ ಜೈಲಿಗೆ ಹೋಗುವ ಡಿಕೆಶಿಯನ್ನು ಸಿಎಂ ಮಾಡುತ್ತಾರೆ. ನಿತ್ಯ ಸೋನಿಯಾಗೆ ಹಣ ಬೇಕಿರುವ ಕಾರಣಕ್ಕೆ ಡಿಕೆಶಿ ಸಿಎಂ ಆಗಲಿದ್ದಾರೆ. ಹಾಗಾಗಿ ಕಾಂಗ್ರೆಸ್​​ಗೆ ಬಿಜೆಪಿಗೆ ಮತ ಹಾಕಿ ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ರು.

ಬಜರಂಗದಳವನ್ನು ಬ್ಯಾನ್​ ಮಾಡಲು ಸಾಧ್ಯವಿಲ್ಲ : ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ಜಾರಿಗೆ ತರಲು ಡಿ.ಕೆ. ಶಿವಕುಮಾರ ಮತ್ತೆ ಹುಟ್ಟಿ ಬಂದರೂ ಸಾಧ್ಯವಿಲ್ಲ. ಬಜರಂಗದಳದವರು ಭಯೋತ್ಪಾದಕರಲ್ಲ. ದೇಶದ ವಿರೋಧಿ ಚಟುವಟಿಕೆ ಮಾಡುವವರಲ್ಲ. ಬಜರಂಗದಳ ಎಂದರೆ ಗಂಗಾವತಿ. ಹನುಮ ಹುಟ್ಟಿದ್ದು ಇಲ್ಲಿಯೇ. ಬಜರಂಗದ ದಳ ನಿಷೇಧದ ಬಗ್ಗೆ ಮತ್ತೊಮ್ಮೆ ಹೇಳಿಕೆ ನೀಡಿದರೆ ಈಗ ಹೆಲಿಕಾಪ್ಟರ್ ಗ್ಲಾಸ್ ಅಷ್ಟೇ ಒಡೆದಿದೆ. ಇನ್ನೊಮ್ಮೆ ಹೇಳಿಕೆ ನೀಡಿದರೆ ಮತ್ತೊಂದು ಗತಿ ಆಗಲಿದೆ ಎಂದು ಯತ್ನಾಳ್​ ಹರಿಹಾಯ್ದರು.

ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡಿದ್ರೆ ಡಿ.ಕೆ ಶಿವಕುಮಾರ್​ ತನ್ನ ತಾಯಿಯ ಬಗ್ಗೆ ಮಾತನಾಡಿದ ಯತ್ನಾಳ್ ನಿಮ್ಮ ನಾಲಿಗೆ ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಕನಕಪುರದಲ್ಲಿರುವ ಅವರ ತಾಯಿಗೆ ಗೌರವ ನೀಡೋಣ. ಇಟಲಿಯವರು ಹೇಗೆ ಡಿಕೆಶಿಗೆ ತಾಯಿ ಆಗ್ತಾರೆ. ಈ ಕಾಂಗ್ರೆಸ್​ನವರು​ ಎಲ್ಲರಿಗೂ ಅಪ್ಪಾಜಿ ಎನ್ನುತ್ತಾರೆ. ಮಹಿಳೆಯರಿಗೆ ತಾಯಿ ಎನ್ನುತ್ತಾರೆ. ರಾಜಕಾರಣದಲ್ಲಿ ಅಪ್ಪಾಜಿ, ತಾಯಿ ಎನ್ನುವವರು ಭಾರಿ ಡೇಂಜರ್. ನಿನಗೆ ಧೈರ್ಯ ಇದ್ದರೆ ನನ್ನ ನಾಲಿಗೆ ಕತ್ತರಿಸುವುದಲ್ಲ. ಮುಟ್ಟಿ ನೋಡು ಎಂದು ವಿಜಯಪುರ ಶಾಸಕ ಸವಾಲ್​ ಹಾಕಿದರು.

ಮಿಸ್ಟರ್ ಡಿ.ಕೆ ಧಮ್ಕಿ ಕೊಡುತ್ತೀರಾ..? ಗೂಂಡಾಗಿರಿ ಮಾಡುತ್ತೀರಾ..? ಕರ್ನಾಟಕವನ್ನು ಕನಕಪುರ ಎಂದು ಭಾವಿಸಿದ್ದೀರಾ..?. ಇಂತಹ ಗೂಂಡಾಗಿರಿ ಪ್ರವೃತ್ತಿಯವರು ಮುಖ್ಯಮಂತ್ರಿಯಾದರೆ ಏನು ಕತೆ..? ಇಂತವರು ನಮ್ಮಂತವರಿಗೆ ಧಮ್ಕಿ ಕೊಡುತ್ತಾರೆ. ಇನ್ನು ಜನಸಾಮಾನ್ಯರ ಕತೆ ಏನು..? ಹೀಗಾಗಿ ಕಾಂಗ್ರೆಸ್​​ಗೆ ಮತ ಹಾಕಬೇಡಿ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ : ಬಜರಂಗದಳ ಬ್ಯಾನ್​ ಮಾಡುವುದು ಮೂರ್ಖತನದ ಪರಮಾವಧಿ : ಬಿ ವೈ ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.