ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಮೆಣೇಧಾಳದ ದೇಸಾಯಿಯವರ ವಾಡೆದಲ್ಲಿ ಜಗನ್ನಾಥ ದಾಸರ ಜೀವನ ಚರಿತ್ರೆ ಕುರಿತಂತೆ ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.
ಬೆಂಗಳೂರಿನ ಮಾತಾಂಭುಜ ಮೂವೀಸ್ನವರು ತಯಾರಿಸುತ್ತಿರುವ ಈ ಚಲನಚಿತ್ರಕ್ಕೆ ಮಂತ್ರಾಲಯದಲ್ಲಿ ಶ್ರೀಗಳು ಚಾಲನೆ ನೀಡಿದ್ದಾರೆ. ರಾಯರ 350ನೇ ಆರಾಧನೆ ದಿನ ಈ ಚಲನಚಿತ್ರವನ್ನು ಬಿಡುಗಡೆ ಮಾಡುವ ಗುರಿ ಇದೆ ಎಂದು ನಿರ್ದೇಶಕ ಮಧುಸೂದನ್ ಹವಲ್ದಾರ ತಿಳಿಸಿದರು.
ಧಾರಾವಾಹಿಯ ಕೆಲವು ನಟರು ನಟಿಸುತ್ತಿದ್ದು, ನಟಿ ನಿಶ್ಚಿತಾ ಶೆಟ್ಟಿ, ಹೈದರಾಬಾದ್ನ ಶರತ್, ರಾಯಚೂರಿನ ಧೀರೆಂದ್ರ, ಪದ್ಮಕಲಾ, ಸುರೇಶ ಹಾವೇರಿ, ಮೆಣೇಧಾಳ ದೇಸಾಯಿ ಮನೆತನದವರೇ ಆದ ಧನಶ್ರೀ ದೇವಿಯವರು ಗೌರವ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಹವಲ್ದಾರ ತಿಳಿಸಿದರು.
ಇದನ್ನೂ ಓದಿ: ಕೋವಿಡ್ ಭೀತಿ: ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖ
ಇಲ್ಲಿನ ಚಿತ್ರೀಕರಣ ಮುಗಿಸಿಕೊಂಡು ಮಾನ್ವಿಯಲ್ಲಿ ಶೂಟಿಂಗ್ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು.