ಕೊಪ್ಪಳ: ರಾಜೀನಾಮೆಯಿಂದ ತೆರವಾಗಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಬಿನಾ ಗೌಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ರತ್ನವ್ವ ನಗರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಹಿಟ್ನಾಳ್ ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಬಿನಾ ಗೌಸ್ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 29 ಸದಸ್ಯ ಬಲದ ಕೊಪ್ಪಳ ಜಿಲ್ಲಾ ಪಂಚಾಯತ್ನಲ್ಲಿ 17 ಕಾಂಗ್ರೆಸ್, 11 ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಈ ಪೈಕಿ ಇಂದು ಕಾಂಗ್ರೆಸ್ ಪಕ್ಷದ 15, ಓರ್ವ ಪಕ್ಷೇತರ, 7 ಜನ ಬಿಜೆಪಿ ಸದಸ್ಯರು ಸೇರಿ ಒಟ್ಟು 23 ಜನ ಸದಸ್ಯರು ಹಾಜರಾಗಿದ್ದರು. ಉಪಾಧ್ಯಕ್ಷರ ಅವಿರೋಧ ಅಯ್ಕೆಯ ಬಳಿಕ ಈ 23 ಜನ ಸದಸ್ಯರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ ವಿರುದ್ಧ ಅವಿಶ್ವಾಸ ಮಂಡಿಸಿ ಯಶಸ್ವಿಯಾಗಿದ್ದಾರೆ.