ಕುಷ್ಟಗಿ: ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ವಣಗೇರಾ ಮೇಲ್ಸೇತುವೆ ಬಳಿ ಲೋಹದ ತಡೆಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ತಂದೆ, ಮಗಳು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತೊಂಡಿಹಾಳ ಗ್ರಾಮದ ಬಸಯ್ಯ ಕಳಕಯ್ಯ ಹಿರೇಮಠ (29) ಹಾಗೂ 5 ವರ್ಷದ ಮಗಳು ಅಕ್ಷರಾ ಮೃತಪಟ್ಟವರು.
ಕುಷ್ಟಗಿಯ ಶರಣಯ್ಯ ಹಿರೇಮನ್ನಾಪೂರ ಅವರ ಮನೆಗೆ ಬಂದಿದ್ದ ಇವರು ಬೈಕಿನಲ್ಲಿ ಪತ್ನಿ ಶಾಂತಮ್ಮ ಹಾಗೂ ಇಬ್ಬರ ಮಕ್ಕಳ ಜೊತೆ ಬಸಯ್ಯ ತಮ್ಮ ಸ್ವಗ್ರಾಮ ತೊಂಡಿಹಾಳಕ್ಕೆ ವಾಪಸ್ ಆಗುತ್ತಿದ್ದರು. ವಣಗೇರಾ ಮೇಲ್ಸೇತುವೆ ದಾಟಿ ಹೊರಟಿದ್ದ ವೇಳೆ ಬೈಕ್ನ ಹ್ಯಾಂಡಲ್ ಹೊರಳಿಸಲು ಸಾಧ್ಯವಾಗದೇ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಸಯ್ಯ ಹಿರೇಮಠ ಹಾಗೂ ಮಗಳು ಸ್ಥಳದಲ್ಲಿ ಮೃತರಾಗಿದ್ದಾರೆ.
ಮೃತನ ಪತ್ನಿ ಶಾಂತಮ್ಮ, ಮಗ ಶ್ರೀಶೈಲ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್ಐ ತಿಮ್ಮಣ್ಣ ನಾಯಕ ಭೇಟಿ ನೀಡಿ ಪರಿಶೀಲಿಸಿದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಶಿವಮೊಗ್ಗ: ರೈಲಿಗೆ ಸಿಲುಕಿ 40ಕ್ಕೂ ಹೆಚ್ಚು ಕುರಿಗಳ ಸಾವು)