ETV Bharat / state

ಬೈಕ್​ ಸ್ಕಿಡ್ ಆಗಿ ರಸ್ತೆಗುರುಳಿದ ಸವಾರ.. ಹಿಂಬದಿಯಿಂದ ಬಂದ ಬಸ್ ಹರಿದು ಸ್ಥಳದಲ್ಲೇ ದುರ್ಮರಣ - ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ

ಬೈಕ್ ಸ್ಕಿಡ್ ಆಗಿ ನೆಲಕ್ಕುರುಳಿದವನ ಮೇಲೆ ಬಸ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಶಿವಶಂಕರ್ ಪುಟ್ಟೇಗೌಡ
ಶಿವಶಂಕರ್ ಪುಟ್ಟೇಗೌಡ
author img

By

Published : Sep 17, 2021, 12:00 PM IST

ಗಂಗಾವತಿ: ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಕೆಎಸ್​ಆರ್​ಟಿಸಿ ಬಸ್​ ಹರಿದು, ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಇಂದಿರಾ ವೃತ್ತದಲ್ಲಿ ನಡೆದಿದೆ.

ಮೃತ ಯುವಕನನ್ನು ಕೇಂದ್ರ ಬಸ್ ನಿಲ್ದಾಣ ಸಮೀಪದ ಅಯ್ಯಂಗಾರ್ ಬೇಕರಿಯ ಮಾಲೀಕ ಶಿವಶಂಕರ್ ಪುಟ್ಟೇಗೌಡ (25) ಎಂದು ಗುರುತಿಸಲಾಗಿದೆ. ಮೂಲತಃ ಹಾಸನ ಜಿಲ್ಲೆಯ ಈ ಯುವಕ ಕಳೆದ ಒಂದು ದಶಕದಿಂದ ಬೇಕರಿ ಉದ್ಯಮದಲ್ಲಿ ತೊಡಗಿಕೊಂಡಿದ್ದರು.

ಕೇಂದ್ರ ಬಸ್ ನಿಲ್ದಾಣದಿಂದ ಜುಲೈ ನಗರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್​​ನ ಸ್ಟ್ಯಾಂಡ್ ರಸ್ತೆಗೆ ತಗುಲಿದ್ದರಿಂದ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ರಭಸವಾಗಿ ಬಂದ ಸಾರಿಗೆ ವಾಹನ ಹರಿದು ಶಿವಶಂಕರ್​ ಮೃತಪಟ್ಟಿದ್ದಾನೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪೆಟ್ರೋಲಿಯಂ ಉತ್ಪನ್ನ ಅಕ್ರಮ ದಾಸ್ತಾನು.. 12.5 ಲಕ್ಷ ರೂ ಮೌಲ್ಯದ ಸ್ವತ್ತು ಜಪ್ತಿ

ಸ್ಥಳಕ್ಕೆ ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ, ನಗರ ಠಾಣೆಯ ಪಿಐ ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.