ಗಂಗಾವತಿ (ಕೊಪ್ಪಳ) : ಅದು ಏಳುನೂರು ಎತ್ತರದ ಗಿರಿಶಿಖರ. ಆ ಬೆಟ್ಟದ ಮೇಲಿಂದ ಎತ್ತ ನೋಡಿದರೂ ಬರೀ ಬೆಟ್ಟಗುಡ್ಡಗಳ ರಾಶಿ. ಮಧ್ಯದಲ್ಲಿ ಅಲ್ಲಲ್ಲಿ ಹಚ್ಚ ಹಸಿರಿನ ಬಾಳೆಗಿಡಗಳ ತೋಟ. ಕಣ್ಣು ತುಂಬಿಕೊಳ್ಳಲು ಸಾಲದು ಎಂಬಂಥಹ ನಿಸರ್ಗದ ಸೊಬಗು. ಈ ದೃಶ್ಯ ವೈಭವವನ್ನು ಬೇಧಿಸಿಕೊಂಡು ಹರಿದ ತುಂಗಭದ್ರೆಯ ವಿಹಂಗಮ ನೋಟ. ಇಂತಹ ಎತ್ತರದ ಬೆಟ್ಟದ ಮೇಲೆ ಯುಗಾದಿ ಅಂಗವಾಗಿ ಭರತನಾಟ್ಯ, ಭಕ್ತಿಗೀತೆಗಳ ಗಾನಸುಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಗಂಗಾವತಿ ತಾಲೂಕಿನ ಅಂಜನಾದ್ರಿ ದೇಗುಲದಲ್ಲಿ ನಡೆಯಿತು.
ಇದನ್ನೂ ಓದಿ : ಮಾದಪ್ಪನ ಬೆಟ್ಟದಲ್ಲಿ ಅದ್ಧೂರಿ ಯುಗಾದಿ ರಥೋತ್ಸವ: ನೋಡಿ ವೈಮಾನಿಕ ದೃಶ್ಯ!
ದೇಗುಲಗಳಲ್ಲಿ ವಿಶೇಷ ಪೂಜೆ: ಯುಗಾದಿ ಹಬ್ಬದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾಕೇಂದ್ರದ ವಿದಾರ್ಥಿಗಳು, ಹುಲಗಿಯ ಶೃತಿ ಹ್ಯಾಟಿ ತಂಡದಿಂದ ಭಕ್ತಿಗೀತೆಗಳ ಹಾಗೂ ಆನೆಗೊಂದಿಯ ಸಂಜನಾ ತಂಡದಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ : ಮರಳಿ ಬಂತು ಯುಗಾದಿ! ಶೋಭಕೃತ್ ಸಂವತ್ಸರ ಸಂಭ್ರಮ
ಆಂಜನೇಯನ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ: ಹೊಸವರ್ಷ ಯುಗಾದಿ ಹಬ್ಬದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸುತ್ತೋಲೆಯ ಪ್ರಕಾರ, ಇಲಾಖೆಯ ನಂಬರ್-1 ಕ್ಯಾಟಗರಿಯ ವ್ಯಾಪ್ತಿಗೆ ಒಳಪಡುವ ಅಂಜನಾದ್ರಿ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ವಿಶೇಷ ಪೂಜೆ, ಹೋಮ-ಹವನ ಹಮ್ಮಿಕೊಳ್ಳಲಾಗಿತ್ತು. ಆಂಜನೇಯನ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ದೇಗುಲದ ಆಡಳಿತಾಧಿಕಾರಿ ತಹಶೀಲ್ದಾರ್ ಮಂಜುನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ಇದನ್ನೂ ಓದಿ : ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವ ಇ-ಪ್ರಸಾದ ಯೋಜನೆ ಕೈ ಬಿಡುವಂತೆ ಒತ್ತಾಯ
ಭಕ್ತ ಸಾಗಾರದಿಂದ ದರ್ಶನ: ಯುಗಾದಿ ಮತ್ತು ಹೊಸವರ್ಷದ ಹಿನ್ನೆಲೆ ಅಂಜನಾದ್ರಿ ದೇಗುಲಕ್ಕೆ ದೊಡ್ಡ ಪ್ರಮಾಣದಲ್ಲಿ ಜನ ಆಗಮಿಸಿದ್ದರು. ಹೊಸವರ್ಷದ ಆರಂಭದಿಂದ ಹಿಡಿದು ಇಡೀ ವರ್ಷ ಉತ್ತಮವಾಗಿರಲಿ ಎಂದು ಹರಕೆ ಹೊತ್ತವರು ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಕೆಲವರು ಸಮೀಪದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ 578 ಮೆಟ್ಟಿಲುಗಳುಳ್ಳ ಅಂಜನಾದ್ರಿಯ ಆಂಜನೇಯನ ಬೆಟ್ಟ ಹತ್ತಿ ದೇವರ ದರ್ಶನ ಮಾಡಿದರು. ಭಕ್ತರ ದಟ್ಟಣೆಯಿಂದಾಗಿ ಸುಗಮ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಇದನ್ನೂ ಓದಿ : ಕೃಷ್ಣಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ: ಯುಗಾದಿಯ ಹೊಸ ವರ್ಷಕ್ಕೆ ಪಲ್ಲಕ್ಕಿ, ಉತ್ಸವಮೂರ್ತಿ ಶುದ್ಧೀಕರಣ
ಭಕ್ತರದಟ್ಟಣೆಯಿಂದಾಗಿ ಸುಗಮ ರಸ್ತೆ ಸಂಚಾರಕ್ಕೆ ಸಮಸ್ಯೆ: ಕೆಲವರು ಸಮೀಪದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ 578 ಮೆಟ್ಟಿಲುಗಳುಳ್ಳ ಅಂಜನಾದ್ರಿಯ ಆಂಜನೇಯನಬೆಟ್ಟ ಹತ್ತಿ ದೇವರ ದರ್ಶನ ಮಾಡಿದರು. ಭಕ್ತರ ದಟ್ಟಣೆಯಿಂದಾಗಿ ಸುಗಮ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಇದನ್ನೂ ಓದಿ : ಯುಗಾದಿ: ಸಿಎಂ ಬೊಮ್ಮಾಯಿ, ದೇವೇಗೌಡ, ಸಿದ್ದರಾಮಯ್ಯ, ಬಿಎಸ್ವೈ ಶುಭಾಶಯ