ಗಂಗಾವತಿ : ರಾಜ್ಯದಲ್ಲಿ ಹಿಜಾಬ್, ಹಲಾಲ್ ಸೇರಿದಂತೆ ಕೋಮು ಸಾಮರಸ್ಯಕ್ಕೆ ಅಡ್ಡಿಯನ್ನು ಉಂಟು ಮಾಡುವ ಹಲವು ವಿವಾದಗಳು ಈಗಾಗಲೇ ತಾರಕಕ್ಕೇರಿವೆ. ಈ ಮಧ್ಯೆ ಕನಕಗಿರಿಯಲ್ಲಿ ಹಿಂದೂಗಳು ದರ್ಗಾದಲ್ಲಿ ಭಜನೆ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಸಾರಿದ್ದಾರೆ.
ಪಟ್ಟಣದ ಯಮನೂರಸಾಬ ದರ್ಗಾದಲ್ಲಿ ಹನುಮ ಮಾಲಾಧಾರಿಗಳು ಭಜನೆ ಮಾಡುವ ಮೂಲಕ ಭಾವೈಕ್ಯತೆಯನ್ನು ಸಾರಿದ್ದಾರೆ. ಹನುಮ ಮಾಲಾಧಾರಿಗಳಿಗೆ ದರ್ಗಾದ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಟ್ಟು, ಸಾಮರಸ್ಯದ ಸಂದೇಶ ನೀಡಿದ್ದಾರೆ.