ಗಂಗಾವತಿ: ಶ್ರೀ ಕ್ಷೇತ್ರ ಅಂಜನಾದ್ರಿಯ ಆಂಜನೇಯನಿಗೆ ಇದೀಗ ಶ್ರೀಕೃಷ್ಣನ ಜನ್ಮಭೂಮಿ ಮಥುರಾದ ಸಾಧು ಸಂತರು 225 ಕೆಜಿಯ ಹಿತ್ತಾಳೆ ಘಂಟೆಯೊಂದನ್ನು ದೇಣಿಗೆಯಾಗಿ ನೀಡಿದ್ದಾರೆ. ಮಥುರಾದಿಂದ ವಿಶೇಷ ವಾಹನದಲ್ಲಿ ಇದನ್ನು ತಂದಿದ್ದು ಸ್ಥಳೀಯ ಯುವಕರ ನೆರವಿನೊಂದಿಗೆ ಬೆಟ್ಟದ ಮೇಲಿರುವ ಅಂಜನಾದ್ರಿಯ ದೇಗುಲಕ್ಕೆ ತಲುಪಿಸಲಾಗಿದೆ.
ಸಮುದ್ರ ಮಟ್ಟದಿಂದ 350ಕ್ಕಿಂತ ಹೆಚ್ಚು ಮೀಟರ್ ಎತ್ತರದಲ್ಲಿರುವ ಅಂಜನಾದ್ರಿ ಪರ್ವತಕ್ಕೆ 575ಕ್ಕೂ ಹೆಚ್ಚು ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳ ಮೂಲಕ ಬೃಹತ್ ಘಂಟೆಯನ್ನು ಹೊತ್ತೊಯ್ಯುವುದು ಸುಲಭದ ಕಾರ್ಯವಾಗಿರಲಿಲ್ಲ. ಸಾಧುಗಳು ಪರ್ಯಾಯ ರಸ್ತೆಯ ಮೂಲಕ ಬೆಟ್ಟ ಹತ್ತಿದರು.
ಇದನ್ನೂ ಓದಿ: ರೈತರು ರಾಶಿ ಹಾಕಿದ್ದ ಬೆಳೆ ಮಳೆ ಪಾಲು: ಎಪಿಎಂಸಿ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ
ಚಿಕ್ಕರಾಂಪೂರಕ್ಕೆ ಹೋಗುವ ಮಾರ್ಗ ಮಧ್ಯೆ ಬರುವ ಸಂಸ್ಕೃತ ವೇದಪಾಠ ಶಾಲೆಯ ಬಳಿ ಇರುವ ಕಾಲುದಾರಿ ಮೂಲಕ ಘಂಟೆಯನ್ನು ಬೆಟ್ಟದ ಮೇಲ್ಭಾಗಕ್ಕೆ ತಲುಪಿಸಲಾಯಿತು. ಸುಮಾರು ಹತ್ತಕ್ಕೂ ಹೆಚ್ಚು ಯುವಕರು ಕಬ್ಬಿಣದ ರಾಡುಗಳಿಗೆ ಘಂಟೆಯನ್ನು ಕಟ್ಟಿ ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟ ಏರಿದರು.
ಇದನ್ನೂ ಓದಿ: ವಿಶ್ವ ಹೋಮಿಯೋಪತಿ ದಿನ: ಸಾಂಪ್ರದಾಯಿಕ, ನೈಸರ್ಗಿಕ ಚಿಕಿತ್ಸೆ ಮಹತ್ವ ಇದು
ಕಳೆದ ವರ್ಷ ಮಥುರಾದ ಸಾಧುಸಂತರ ಟ್ರಸ್ಟ್ನಿಂದ 201 ಕೆಜಿ ಗಾತ್ರದ ಘಂಟೆಯನ್ನು ಇಲ್ಲಿಗೆ ನೀಡಲಾಗಿತ್ತು. ಆದರೆ, ಘಂಟೆಯ ಒಂದು ಭಾಗದಲ್ಲಿ ಸೀಳಿದ್ದು ಪೂಜೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಮತ್ತೆ ಘಂಟೆ ಬದಲಿಸಲು ಸಾಧು-ಸಂತರ ತಂಡ ನಿರ್ಧಾರ ಕೈಗೊಂಡಿತ್ತು.
ಇದನ್ನೂ ಓದಿ: ಈಗಲೇ ಉತ್ತಮ ಯೋಜನೆ ರೂಪಿಸಿ, ಮುಂದಿನ ನಿವೃತ್ತ ಜೀವನವನ್ನ ಟೆನ್ಷನ್ ಪ್ರೀಯಾಗಿ ಕಳೆಯಿರಿ!
ಮಥುರಾದ ಕಾಷ್ಠಶಿಲ್ಪಿಯೊಬ್ಬರು 250 ಕೆಜಿ ಭಾರದ ಘಂಟೆ ಸಿದ್ಧಪಡಿಸಿದ್ದು, ಎರಡು ಲಕ್ಷ ರೂ ಮೊತ್ತದ ಹಿತ್ತಾಳೆ, ಸಾಗಾಣಿಕೆ ವೆಚ್ಚ 30 ಸಾವಿರ ರೂ ಸೇರಿ ಒಟ್ಟು ಸುಮಾರು ಎರಡೂವರೆ ಲಕ್ಷ ರೂ ಖರ್ಚು ತಗುಲಿದೆ. ಶಿಲ್ಪಿ ಎರಡು ತಿಂಗಳಿಗೂ ಅಧಿಕ ಕಾಲ ತೆಗೆದುಕೊಂಡಿದ್ದಾರೆ ಎಂದು ಗೌರವದಾಸ ಎಂಬ ಸಂತರು ತಿಳಿಸಿದರು.
ಇದನ್ನೂ ಓದಿ: UPI ಮೂಲಕವೇ ಸಿಗಲಿದೆ ಸಾಲ: ಬ್ಯಾಂಕ್ಗಳಿಗೆ RBI ಅನುಮತಿ
UPSC ನೇಮಕಾತಿ: ಜ್ಯೂ.ಎಂಜಿನಿಯರ್ ಸೇರಿ 146 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ