ಗಂಗಾವತಿ : ಸರ್ಕಾರಿ ಕಚೇರಿ ಎಂದರೆ ಅಲ್ಲೊಂದಿಷ್ಟು ಅವ್ಯವಸ್ಥೆಯಿಂದ ಕೂಡಿರುತ್ತದೆ, ಎಲ್ಲೋ ಪರಿಸರದ ಆಸಕ್ತಿ ಇರುವ ಅಧಿಕಾರಿಗಳಾದರೆ ಒಂದಿಷ್ಟು ಹೂ ಗಿಡಗಳ ಪಾಟ್ ನೆಟ್ಟಿರುತ್ತಾರೆ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತೀರ್ಣ ಕಚೇರಿಯ ಮುಂಭಾಗದಲ್ಲಿ ಉದ್ಯಾನದ ರೀತಿಯಲ್ಲಿ ನಿರ್ಮಾಣವಾಗಿರುವ ಪರಿಸರ ಜನರನ್ನು ಆಕರ್ಷಿಸುತ್ತಿದೆ
ಕಚೇರಿಗೆ ಕಾಲಿಟ್ಟರೆ ಸಾಕು ಉದ್ಯಾನದ ರೀತಿಯಲ್ಲಿರುವ ಪರಿಸರ ಜನರನ್ನು ಸ್ವಾಗತಿಸುತ್ತದೆ. ಕಟ್ಟಡದ ಮೇಲ್ಮಹಡಿಯಲ್ಲಿ ಕಚೇರಿ ಇದೆ, ಕೇಂದ್ರ ಬಸ್ ನಿಲ್ದಾಣದ ಹತ್ತಿರ ಆಫೀಸ್ ಇರುವ ಕಾರಣಕ್ಕೆ ಬರುವ ಬರುವ ಜನರು ಇದರಿಂದ ಖುಷಿಯಾಗಿದ್ದಾರೆ ಎನ್ನುತ್ತಾರೆ ಇಲಾಖೆಯ ವಿಸ್ತೀರ್ಣಾಧಿಕಾರಿ ಶ್ರೀನಿವಾಸ ನಾಯಕ್.