ಕೊಪ್ಪಳ: ಬಾಳೆ ತೋಟದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಗನಾಳ ಗ್ರಾಮದ ಶೇಷಪ್ಪ ರಾಮಪ್ಪ ಎಂಬುವವರ ಬಾಳೆ ತೋಟದಲ್ಲಿ ಕರಡಿ ಬೀಡು ಬಿಟ್ಟಿದೆ. ಇಂದು ಬೆಳಗ್ಗೆ ರೈತರು ಬಾಳೆ ತೋಟದಲ್ಲಿ ಹೋಗಿದ್ದಾಗ ಕರಡಿ ಮಲಗಿರೋದು ಕಂಡು ಗಾಬರಿಯಾಗಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಾಳೆ ತೋಟದಲ್ಲಿ ಕರಡಿ ಬಿಡು ಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಓದಿ : ಕೊರೊನಾ ಸೋಂಕಿಗೆ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಬಲಿ