ETV Bharat / state

ಬಿ.ಸಿ.ಪಾಟೀಲ್ ರೈತರ ಕ್ಷಮೆ ಕೇಳಬೇಕು: ಶಾಸಕ ರಾಘವೇಂದ್ರ ಹಿಟ್ನಾಳ್ - B.C. Raghavendra Hitnal urges Patil to apologize to farmers

ಬಿ.ಸಿ.ಪಾಟೀಲ್ ಒಬ್ಬ ಕೃಷಿ ಸಚಿವರಾಗಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

Raghavendra Hitnall
ರಾಘವೇಂದ್ರ ಹಿಟ್ನಾಳ್
author img

By

Published : Dec 4, 2020, 3:21 PM IST

ಕೊಪ್ಪಳ: ಸ್ವಾಭಿಮಾನದಿಂದ ಬದುಕಲಾಗದ ಸನ್ನಿವೇಶದ ಸ್ಥಿತಿಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಡಿಗಳಲ್ಲ. ಒಬ್ಬ ಕೃಷಿ ಸಚಿವರಾಗಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿ.ಸಿ.ಪಾಟೀಲ್ ರೈತರ ಕ್ಷಮೆ ಕೇಳಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಆಗ್ರಹಿಸಿದ್ದಾರೆ.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ್

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ಇಂದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಬೆಲೆ ಕುಸಿತ ಕಂಡಾಗ ಬೆಳೆಗಳನ್ನು ಸೂಕ್ತ ಬೆಲೆಯಲ್ಲಿ ಸರ್ಕಾರ ಖರೀದಿಸಿ ರೈತರಿರೆ ಸಪೋರ್ಟ್ ಮಾಡೋದಿಲ್ಲ. ಸಾಲ ಮಾಡಿ ರೈತರು ಬೆಳೆ ಬೆಳೆದಿರುತ್ತಾರೆ. ಬೆಳೆ ಕುಸಿತವಾದ ಸಂದರ್ಭದಲ್ಲಿ ಸಾಲ ತೀರಿಸಲಾಗದೆ, ಸ್ವಾಭಿಮಾನದಿಂದ‌ ಬದುಕಲೂ ಆಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಡಿಗಳು ಎಂದು ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ಒಬ್ಬ ಕೃಷಿ ಸಚಿವರಾಗಿ ಆ ರೀತಿ ಮಾತನಾಡಬಾರದು. ಕೂಡಲೇ ಅವರು ರೈತರ ಕ್ಷಮೆ ಕೇಳಬೇಕು ಎಂದರು.

ಓದಿ: ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಮಾಡುವವರು ಹೇಡಿಗಳು: ಬಿ.ಸಿ.ಪಾಟೀಲ್

ಕೃಷಿ ಸಚಿವರಾಗಿ ಅವರು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಚಿವ ಪಾಟೀಲ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.