ETV Bharat / state

ತಾಕತ್ತಿದ್ರೆ ಪಕ್ಷದಿಂದ ಉಚ್ಛಾಟಿಸಲಿ: ಮಾಜಿ ಸಚಿವನಿಗೆ ಹಾಲಿ ಶಾಸಕ ಸವಾಲ್​​

author img

By

Published : Feb 29, 2020, 7:52 PM IST

ಮಾಜಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಂಡಿಸಿ ಪಕ್ಷದಿಂದ ಉಚ್ಛಾಟಿಸಲಾಗುವುದು ಎಂಬ ಹೇಳಿಕೆಗೆ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ಪ್ರತಿಕ್ರಯಿಸಿದ್ದು, ತಾಕತ್ತು ಇದ್ರೆ ಪಕ್ಷದಿಂದ ಉಚ್ಛಾಟಿಸಲಿ ಎಂದು ತಿರುಗೇಟು ನೀಡಿದ್ದಾರೆ.

Basavaraj dadesugur
ಬಸವರಾಜ್ ದಢೇಸೂಗುರು

ಗಂಗಾವತಿ: ಮಾಜಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಂಡಿಸಿ ಪಕ್ಷದಿಂದ ಉಚ್ಛಾಟಿಸಲಾಗುವುದು ಎಂಬ ಹೇಳಿಕೆಗೆ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ಪ್ರತಿಕ್ರಯಿಸಿದ್ದು, ತಾಕತ್ತು ಇದ್ರೆ ಪಕ್ಷದಿಂದ ಉಚ್ಛಾಟಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಶಾಸಕ ಬಸವರಾಜ್ ದಡೇಸೂಗುರು

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಶಾಸಕ, ಎರಡು ಬಾರಿ ಸಚಿವ, ಈಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತರಾಗಿರುವ ಶಿವರಾಜ ತಂಗಡಗಿ, ತಾಕತ್ ಇದ್ರೆ ಕಾಂಗ್ರೆಸ್‌ ಪಕ್ಷದ ಕೊಪ್ಪಳ ಜಿಲ್ಲಾ ಪಂಚಾಯತಿ ಹಾಲಿ ಅಧ್ಯಕ್ಷರನ್ನು ಉಚ್ಛಾಟಿಸಲಿ. ನಾವೂ ನೋಡುತ್ತೇವೆ ಎಂದು ಸವಾಲು ಹಾಕಿದರು.

ಜಿಲ್ಲಾ ಪಂಚಾಯತಿ ಅಧ್ಯಕ್ಷ ಹಾಗೂ ಕೆಲ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಬರುತ್ತಾರೆ ಎಂದು ದಿಗಿಲುಗೊಂಡು ಭ್ರಷ್ಟಾಚಾರದ ಆರೋಪ ಹೊರಿಸಲಾಗುತ್ತಿದೆ. ಕಳೆದ ಹದಿನಾಲ್ಕು ತಿಂಗಳು ಈ ಬಗ್ಗೆ ಯಾಕೆ ಮಾತನಾಡಿರಲಿಲ್ಲ. ಪಕ್ಷಕ್ಕೆ ಯಾರೇ ಬರಲಿ ನಾವು ಸ್ವಾಗತಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.