ಗಂಗಾವತಿ: ಬಿಜೆಪಿ ಫೈರ್ ಬ್ರಾಂಡ್ ನಾಯಕ ಎಂದು ಗುರುತಿಸಿಕೊಂಡಿರುವ ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಮುಖ್ಯಮಂತ್ರಿಯಾಗಬೇಕಂತೆ. ಹೀಗೊಂದು ಬೇಡಿಕೆಯೊಂದನ್ನು ಬಾಳೆ ಹಣ್ಣಿನಲ್ಲಿ ಬರೆದುಕೊಂಡು, ರಥೋತ್ಸವ ಸಾಗುತ್ತಿದ್ದ ಸಂದರ್ಭದಲ್ಲಿ ದೇವರ ಬಳಿಗೆ ತೂರಿ ಬೇಡಿಕೆ ತಮ್ಮ ಈಡೇರಿಸುವಂತೆ ಯತ್ನಾಳ್ ಅಭಿಮಾನಿಗಳು ದೇವರಲ್ಲಿ ಕೋರಿಕೊಂಡಿರುವ ಘಟನೆ ತಾಲೂಕಿನ ಹಣವಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಕೆಲ ಯುವಕರು ಹಾಗೂ ಯತ್ನಾಳ ಬೆಂಬಲಿಗರು, ಬಾಳೆಹಣ್ಣಿನ ಮೇಲೆ ಈ ಬಗ್ಗೆ ಬರೆದು ರಥದ ಮೇಲೆ ತೂರಿದ್ದರು. ರಥ ಎಳೆಯುವ ಸಂದರ್ಭದಲ್ಲಿ ನಮ್ಮ ಬಯಕೆಗಳ ಬಗೆಗೆ ದೇವರಲ್ಲಿ ಹರಕೆ ಹೊತ್ತು ಉತ್ತುತ್ತೆ, ಬಾಳೆಹಣ್ಣು, ಹೂವು, ಕಲ್ಲು ಸಕ್ಕರೆ ಎರಚಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಈ ಭಾಗದಲ್ಲಿದೆ.
ಇದನ್ನೂ ಓದಿ : ಮದುವೆ ಮಾಡಿಕೊಳ್ಳಲು ₹2 ಲಕ್ಷ ಬೇಡಿಕೆ ಇಟ್ಟ ವಧು: ವರನ ತಂದೆಗೆ ಹೃದಯಾಘಾತ!