ETV Bharat / state

ಗಣಾಧಿಪತಿಗೂ ವಿಘ್ನವುಂಟಂತೆ.. ಬಲಮುರಿ ಗಣಪನ ಬಗೆಗಿನ ಪಾಪ-ಪುಣ್ಯದ ಪರೀಕ್ಷೆ.. - ಎಡಮುರಿ ಗಣೇಶ ಮೂರ್ತಿ

ಬಲಮುರಿ ಗಣಪತಿಯು ದಕ್ಷಿಣ ದಿಕ್ಕನ್ನ ಸೂಚಿಸುವುದರಿಂದ ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳು ಪರೀಕ್ಷೆಯಾಗುವುದರಿಂದ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಅದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ ಎಂಬ ನಂಬಿಕೆ ಇದೆ..

balamuri-ganesh-idol-are-not-usually-made-by-artists-know-why-dot
ಬಲಮುರಿ ಗಣಪನ ತಯಾರಿಕೆಗೆ ಹಿಂದೇಟು ಯಾಕೆ..?
author img

By

Published : Sep 10, 2021, 3:44 PM IST

ಕೊಪ್ಪಳ : ಅಪವಾದ ಎಂಬುದು ಕೇವಲ ಮಾನವರಿಗೆ ಮಾತ್ರವಲ್ಲ, ದೇವರುಗಳಿಗೂ ತಪ್ಪಿಲ್ಲ. ಪ್ರಥಮಪೂಜಿತ ವಿಘ್ನನಿವಾರಕ ಗಣಪನಿಗೂ ವಿಘ್ನ ತಪ್ಪಿದಲ್ಲ. ಬಲಮುರಿ ಗಣಪ ಮೂರ್ತಿ ತಯಾರಿಸಿದರೆ ಕೇಡಾಗುತ್ತದೆ ಎಂಬ ನಂಬಿಕೆಯಿಂದ ಬಲಮುರಿ ಗಣೇಶಮೂರ್ತಿ ತಯಾರಿಸುವವರ ಸಂಖ್ಯೆ ತೀರಾ ಕಡಿಮೆ. ಆದರೆ, ಬಲಮುರಿ ಗಣಪನ ಪ್ರತಿಷ್ಠಾಪಿಸಿದರೆ ಒಳಿತಾಗಲಿದೆ ಎಂಬುದು ಮತ್ತೊಂದು ನಂಬಿಕೆ.

ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಎಲ್ಲಿ ನೋಡಿದರೂ ಎಡಮುರಿ ಗಣೇಶ ಮೂರ್ತಿಗಳನ್ನು ಕಾಣುತ್ತೇವೆ. ಬಲಗಡೆ ಸೊಂಡಿಲು ಇರುವ ಗಣೇಶ ಮೂರ್ತಿಗಳನ್ನು ಕಾಣುವುದು ವಿರಳಾತಿವಿರಳ. ನೂರಕ್ಕೆ ಒಂದೆರಡು ಎಂಬಂತೆ ಬಲಮುರಿ ಗಣೇಶ ಮೂರ್ತಿಗಳು ಕಾಣಸಿಗುತ್ತವೆ.

ಎಡ ಭಾಗಕ್ಕೆ ಸೊಂಡಿಲು ಇರುವ ಗಣೇಶ ಮೂರ್ತಿಗಳನ್ನು ಬಹಳಷ್ಟು ಕಲಾವಿದರು ತಯಾರಿಸುತ್ತಾರೆ. ಆದರೆ, ಬಲಮುರಿ ಗಣೇಶ ಮೂರ್ತಿಗಳನ್ನು ತಯಾರು ಮಾಡಲು ಹಿಂದೇಟು ಹಾಕುತ್ತಾರೆ.

ಬಲಮುರಿ ಗಣಪನ ತಯಾರಿಕೆಗೆ ಹಿಂದೇಟು ಯಾಕೆ?

ಈ ಬಲಮುರಿ ಗಣಪನ ತಯಾರಿ ಮಾಡದ ಹಿಂದೆ ಹಲವು ನಂಬಿಕೆ ಇದೆ. ಮುಖ್ಯವಾಗಿ ಬಲಮುರಿ ಗಣಪನನ್ನ ತಯಾರಿಸಿದರೆ ಕಲಾವಿದರಿಗೆ ಕೆಡುಕುಂಟಾಗಲಿದೆ ಎನ್ನಲಾಗುತ್ತದೆ. ಬಲಮುರಿ ಗಣಪತಿಯು ದಕ್ಷಿಣ ದಿಕ್ಕನ್ನ ಸೂಚಿಸುವುದರಿಂದ ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳು ಪರೀಕ್ಷೆಯಾಗುವುದರಿಂದ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಅದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ ಎಂಬ ನಂಬಿಕೆ ಇದೆ.

ಜೊತೆಗೆ ಕೆಲವು ಶಾಸ್ತ್ರಗಳ ಪ್ರಕಾರ ಬಲಮುರಿ ಗಣಪತಿಯನ್ನು ನಿತ್ಯ ಪೂಜಿಸಲು ಯೋಗ್ಯವಲ್ಲ ಎನ್ನಲಾಗುತ್ತದೆ. ಹೀಗಾಗಿ, ಎಷ್ಟೇ ಹಣ ನೀಡಿದರೂ ಕೆಲ ಕಲಾವಿದರು ಬಲಮುರಿ ಗಣಪನನ್ನ ತಯಾರಿಸುವುದಿಲ್ಲ. ಆದರೆ, ಇನ್ನೊಂದೆಡೆ ಬಲಮುರಿ ಗಣಪನ ತಂದು ಪ್ರತಿಷ್ಠಾಪಿಸಿದರೆ ಒಳಿಗತಾಗಲಿದೆ ಅಂತಲೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಷೇಧದ ನಡುವೆಯೂ ಪಿಒಪಿ ಗಣಪನ ಮಾರಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.