ETV Bharat / state

'ಸುಪ್ರೀಂ' ತೀರ್ಪು ಉಲ್ಲಂಘನೆ ಹಿನ್ನೆಲೆ ಸಿಎಫ್ಐ ಜಿಲ್ಲಾಧ್ಯಕ್ಷನ ವಿರುದ್ಧ ಎಫ್ಐಆರ್

ಬಾಬರಿ ಮಸೀದಿ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಆದರೆ, ಚಾಂದ್ ಸಲ್ಮಾನ್ ಸಂಘಟನೆ ಈ ವಿಷಯವಾಗಿ ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಹಾಗೂ ಉರ್ದುವಿನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ ಹಿನ್ನೆಲೆ ಸಿಎಫ್ಐ ಜಿಲ್ಲಾಧ್ಯಕ್ಷನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಸಿಎಫ್ಐ ಜಿಲ್ಲಾಧ್ಯಕ್ಷನ ಮೇಲೆ ಎಫ್ಐಆರ್
ಸಿಎಫ್ಐ ಜಿಲ್ಲಾಧ್ಯಕ್ಷನ ಮೇಲೆ ಎಫ್ಐಆರ್
author img

By

Published : Nov 30, 2020, 1:53 PM IST

ಗಂಗಾವತಿ: ಮುಗಿದು ಹೋಗಿರುವ ಬಾಬರಿ ಮಸೀದಿಯ ವಿವಾದವನ್ನು ಮತ್ತೆ ಸಾರ್ವಜನಿಕರಲ್ಲಿ ಚರ್ಚೆಗೆ ಆಹ್ವಾನ ನೀಡಿದ ಆರೋಪದ ಮೇಲೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾಧ್ಯಕ್ಷ ಚಾಂದ್ ಸಲ್ಮಾನ್ ವಿರುದ್ಧ ಇಲ್ಲಿನ ನಗರಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸಿಎಫ್ಐ ಜಿಲ್ಲಾಧ್ಯಕ್ಷನ ಮೇಲೆ ಎಫ್ಐಆರ್
ಸಿಎಫ್ಐ ಜಿಲ್ಲಾಧ್ಯಕ್ಷನ ಮೇಲೆ ಎಫ್ಐಆರ್

ಬಾಬರಿ ಮಸೀದಿ ವಿಚಾರವಾಗಿ ಏನೇ ಸಮಸ್ಯೆ ಇದ್ದರೂ ಕಾನೂನು ಪರಿವಿಧಿಯಲ್ಲಿ ಮಾತ್ರ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಆದರೆ, ಚಾಂದ್ ಸಲ್ಮಾನ್ ಸಂಘಟನೆಯ ಜಿಲ್ಲಾ ಫೇಸ್​​ಬುಕ್ ಖಾತೆಯಲ್ಲಿ 'ಐತಿಹಾಸಿಕ ಬಾಬರಿ ಮಸೀದಿ ಮತ್ತು ನ್ಯಾಯ ನಿರಾಕರಣೆ' ಎಂಬ ವಿಷಯದ ಮೇಲೆ ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್​ ಹಾಗೂ ಉರ್ದುವಿನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ ಎನ್ನಲಾಗಿದೆ.

ಡಿ.5ರಂದು ರಾಜ್ಯ ಬಂದ್​​: ಬಿಬಿಎಂಪಿ ಮಾರುಕಟ್ಟೆಗಳಿಂದ ಬೆಂಬಲ ಇಲ್ಲ

ಈ ಹಿನ್ನೆಲೆ ಕಾನೂನು ಬಾಹಿರವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಮತ್ತು ಜನರಲ್ಲಿ ತಪ್ಪು ಭಾವನೆ ಮೂಡಿಸುವುದು, ದೇಶದ ಸಾರ್ವಭೌಮತ್ವ ಹಾಗೂ ಏಕತೆಗೆ ಧಕ್ಕೆಯುಂಟು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ನಗರಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.