ETV Bharat / state

ಕುಷ್ಟಗಿ: ಧರ್ಮಸ್ಥಳ ಸಂಘದಿಂದ ಕೊರೊನಾ ಜಾಗೃತಿ ಕಾರ್ಯಕ್ರಮ

ಕೊರೊನಾ ಹರಡುತ್ತಿರುವ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್​ನ ಸಹಯೋಗದಲ್ಲಿ ಕೊರೊನಾ ವಿರುದ್ಧ ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ. ಕೊರೊನಾ ವಿರುದ್ಧ ಯಾವ ರೀತಿಯ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂಬ ಕರಪತ್ರವನ್ನು ಹಂಚುವ ಮೂಲಕ ಜನರಲ್ಲಿ ಜಗೃತಿ ಮೂಡಿಸಲು ಸಂಘ ಮುಂದಾಗಿದೆ.

Awareness against Corona by Dharmasthala Rural Development Project
ಕುಷ್ಟಗಿ: ಧರ್ಮಸ್ಥಳ ಸಂಘದ ವತಿಯಿಂದ ಕೊರೊನಾ ವಿರುದ್ಧ ಜಾಗೃತಿ ಕಾರ್ಯಕ್ರಮ
author img

By

Published : Jun 12, 2020, 10:36 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇವರ ಸಹಯೋಗದಲ್ಲಿ ಕೊರೊನಾ ವೈರಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮಕ್ಕೆ ತಹಶಿಲ್ದಾರ್ ಎಂ. ಸಿದ್ದೇಶ್ ಕರಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಕುಷ್ಟಗಿಯ 15ನೇ ವಾರ್ಡಿನಲ್ಲಿ ನಡೆದ ಕೋವಿಡ್-19 ಜಾಗೃತಿ ಕಾರ್ಯಕ್ರಮದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿನಾಯಕ್ ನಾಯಕ ಅವರು, ಕೊರೊನಾ ಹೇಗೆ ತಡೆಗಟ್ಟಬೇಕು ಎಂದುದನ್ನು ತಿಳಿಯಿರಿ. ಸೋಂಕಿನ ಬಗ್ಗೆ ಖಿನ್ನರಾಗದೆ ಮನೋಸ್ಥೈರ್ಯದಿಂದ ಎದುರಿಸಲು ಮಾನಸಿಕವಾಗಿ ಸಿದ್ದರಾಗಿರಿ ಎಂದರು.

ಅಲ್ಲದೆ ಕೊರೊನಾ ವೈರಸ್ ಸಮುದಾಯಿಕವಾಗಿ ಹರಡದಂತೆ ಹೆಚ್ಚು ಮುಂಜಾಗೃತೆ ಅಗತ್ಯವಾಗಿದೆ. ಮಕ್ಕಳಿಗೂ ಮನೆಯ ಸದಸ್ಯರ ರಕ್ಷಣೆಗಾಗಿ ಈ ಸೋಂಕನ್ನು ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಚನ್ನವೀರಪ್ಪ ತಾಜುದ್ದೀನ್ ದಳಪತಿ, ಗ್ರಾಮ ಲೆಕ್ಕಾಧಿಕಾರಿ ರಮೇಶ್ ತಾಳಕೇರಿ, ಚೇತನ್ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.