ಕುಷ್ಟಗಿ(ಕೊಪ್ಪಳ): ದಿ.ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ಚಿರು ಅಪ್ಪಟ ಅಭಿಮಾನಿಯಾಗಿರುವ ಕುಷ್ಟಗಿ ಆಟೋ ಡ್ರೈವರ್ ಶಿವು ಚಲವಾದಿ ಎಂಬುವವರು ಶಿವಾರ್ಜುನ ಚಿತ್ರಕ್ಕೆ 8ಸಾವಿರ ಬೆಲೆಯ 100 ಟಿಕೆಟ್ ಖರೀದಿಸಿ ಪ್ರೇಕ್ಷಕ ವರ್ಗಕ್ಕೆ ಉಚಿತವಾಗಿ ಹಂಚಿ ಅಭಿಮಾನ ಮೆರೆದಿದ್ದಾರೆ.
ಅಲ್ಲದೇ ಕೊರೊನಾ ವೈರಸ್ ಹಿನ್ನೆಲೆಯಲ್ಲಿ 100 ಮಾಸ್ಕ್ ಉಚಿತವಾಗಿ ಹಂಚಿ ಶಿವಾರ್ಜುನ ಚಿತ್ರ ಯಶಸ್ಸಿಗೆ ಹಾರೈಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚಿರು ಇಂದು ನಮ್ಮೊಂದಿಗೆ ಇಲ್ಲ. ಆದರ, ಅವರ ಪುತ್ರ ಜನಿಸಿರುವುದು ಖುಷಿಯ ವಿಚಾರ ಎಂದರು.
ಲಾಕಡೌನ್ ಬಳಿಕ ಮೊದಲ ಪ್ರದರ್ಶನ : ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದಾಗಿ ಕಳೆದ ಆರೇಳು ತಿಂಗಳ ಬಂದ್ ಆಗಿದ್ದ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಪುನಾರಂಭಕ್ಕೆ ಹಸಿರು ನಿಶಾನೆ ತೋರಿಸಿದೆ. ಹೀಗಾಗಿ ಕುಷ್ಟಗಿಯಲ್ಲಿ ಮಾರುತಿ ಚಿತ್ರ ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರದೊಂದಿಗೆ ಭರ್ಜರಿಯಾಗಿ ಪ್ರದರ್ಶನ ಕಂಡಿತು.
ಅ.15ರಂದು ಶುರುವಾಗಬೇಕಿದ್ದ ಚಿತ್ರಮಂದಿರಗಳು, ಪ್ರೇಕ್ಷಕರು ಚಿತ್ರಮಂದಿರದತ್ತ ಸುಳಿಯುತ್ತಾರೋ ಇಲ್ಲವೋ ಹಿಂಜರಿಕೆಯಿಂದ ಇಲ್ಲಿನ ಮಾರುತಿ ಚಿತ್ರ ಮಂದಿರದಲ್ಲಿ ಶಿವಾರ್ಜುನ ಮೊದಲ ಪ್ರದರ್ಶನ ಆರಂಭಗೊಂಡಿತು. ಚಿರು ಅಭಿಮಾನಿಗಳು ಶಿವಾರ್ಜುನ ಫೋಸ್ಟರ್ಗೆ ಪೂಜೆ ಸಲ್ಲಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.