ಗಂಗಾವತಿ (ಕೊಪ್ಪಳ): ಸಾರ್ವಜನಿಕ ಸ್ಥಳದಲ್ಲಿ ತ್ರಿಬಲ್ ರೈಡಿಂಗ್ ಮಾಡಿದ್ದಲ್ಲದೇ, ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಮೂವರು ಯುವಕರು ಹಲ್ಲೆ ನಡೆಸಿರುವ ಘಟನೆ ಗಂಗಾವತಿ ಪಟ್ಟಣದಲ್ಲಿ ನಡೆದಿದೆ.
ಈ ಕುರಿತು ಗಂಗಾವತಿ ಸಂಚಾರಿ ಠಾಣೆಯ ಕಾನ್ಸ್ಟೇಬಲ್ ರವೀಂದ್ರ ಅವರು, ಅರ್ಬಾಜ್ ಖಾನ್, ರಜ್ದಾರ್ ಖಾನ್ ಹಾಗೂ ಮತ್ತೊಬ್ಬ ಆರೋಪಿ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
"ಗಂಗಾವತಿಯ ಮಹಾವೀರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಮೂವರು ಯುವಕರು ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದು, ವಿಚಾರಣೆ ನಡೆಸುವಂತೆ ಕೋರಿದರು. ಬಳಿಕ ನಾನು ಅವರ ಬೈಕ್ ಹಿಂಬಾಲಿಸಿದೆ. ಇದನ್ನು ಕಂಡ ಯುವಕರು, ತಮ್ಮ ಬೈಕನ್ನು ಗುಂಡಮ್ಮ ಕ್ಯಾಂಪ್ ಮಾರ್ಕೆಟ್ ಒಳಗೆ ನುಗ್ಗಿಸಿದರು. ಬಳಿಕ ಅಲ್ಲಿ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಮಾರ್ಮಾಂಗ ಹಾಗೂ ಮುಖಕ್ಕೆ ಹೊಡೆದಿದ್ದಾರೆ." ಎಂದು ಪೇದೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ಒಳಉಡುಪಿನಲ್ಲಿ ಮರೆಮಾಚಿ 39 ಲಕ್ಷ ಮೌಲ್ಯದ ಚಿನ್ನ ಸಾಗಾಟ: ಮಹಿಳೆ ಬಂಧನ