ಗಂಗಾವತಿ (ಕೊಪ್ಪಳ): ಮೊಹರಂ ಹಬ್ಬದ ಆಚರಣೆ ವೇಳೆ ಗುಂಪು ಕಟ್ಟಿಕೊಂಡು ಕುಣಿಯದಂತೆ ಸೂಚನೆ ನೀಡಿದ ಕಾರಣಕ್ಕೆ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ 15 ಜನರ ವಿರುದ್ದ ದೂರು ದಾಖಲಾಗಿದೆ.
ಪ್ರಭು ದೇವಪ್ಪ ತಳವಾರ, ತಿಮ್ಮಣ್ಣ ರುದ್ರೇಶ ವಡಕಿ, ಅಶೋಕ ಅಮರೇಶ, ವೆಂಕಟೇಶ ಸಿದ್ದಪ್ಪ, ಮುದಿಯಪ್ಪ ನಿಂಗಪ್ಪ, ಉಮೇಶ ಸಣ್ಣ ಪರಸಪ್ಪ, ಹೋಳಗಿ ಶರಣಪ್ಪ ಸಿದ್ದಪ್ಪ, ಶಿವು ದ್ಯಾವಪ್ಪ ಮಲ್ಲಿಗೆವಾಡ, ರುದ್ರೇಶ ಅಮರಪ್ಪ ಕ್ಯಾಂಪಿನ, ಸಿದ್ದಪ್ಪ ರಾಮಣ್ಣ ಮತ್ನಾಳ, ಯಮನೂರಪ್ಪ ಪರಸಪ್ಪ ತಳವಾರ, ಕನಕಪ್ಪ ಪಾಮಣ್ಣ ಕನಕಗಿರಿ, ಗವಿಸಿದ್ದಪ್ಪ ನಾಯಕ್ ತಳವಾರ, ಮಹೇಶ ದೊಡ್ಡಬಸವ ತಳವಾರ ಹಾಗೂ ಚಂದೂಸಾಬ ರಾಜಾಸಾಬ ಎಂಬ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗ್ರಾಮೀಣ ಸಿಪಿಐ ಸುರೇಶ್ ತಳವಾರ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಪೇದೆ ನೀಡಿದ ದೂರಿನ ಹಿನ್ನೆಲೆ, ಆರೋಪಿಗಳ ವಿರುದ್ದ ವಿಪ್ಪತ್ತು ನಿರ್ವಹಣ ಕಾಯ್ದೆ ಉಲ್ಲಂಘನೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ನಿಷೇಧಾಜ್ಞೆ ಉಲ್ಲಂಘನೆ ಹಾಗೂ ಬೆದರಿಕೆ ಪ್ರಕರಣ ದಾಖಲಾಗಿದೆ.